ಅಯೋಧ್ಯಾ: ನೆಲಸಮಗೊಂಡಿರುವ ಬಾಬರಿ ಮಸೀದಿಯ ಅವಶೇಷಗಳ ಮೇಲಿನ ಹಕ್ಕು ಸ್ಥಾಪನೆಗಾಗಿ ಬಾಬರಿ ಮಸೀದಿ ಕ್ರಿಯಾ ಸಮಿತಿ(ಬಿಎಂಎಸಿ) ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಚಿಂತನೆ ನಡೆಸಿದೆ ಎಂದು ಅದರ ಸಮನ್ವಯಕಾರ ಜಫರ್​ಯಾಬ್​ ಜಿಲಾನಿ ಪಿಟಿಐಗೆ ತಿಳಿಸಿದ್ದಾರೆ.ಅಯೋಧ್ಯೆಯ ಮುಸ್ಲಿಮರು ಈ ಅವಶೇಷಗಳನ್ನು ಕೂಡಿ ಹಾಕಲು ಜಮೀನು ಹೊಂದಿಸಿದ್ದಾರೆ. ಈ ವಿಷಯವಾಗಿ ನಾವು ನ್ಯಾಯವಾದಿ ರಾಜೀವ್ ಧವನ್ ಅವರ ಜತೆಗೆ ಚರ್ಚೆ ನಡೆಸಿದ್ದೇವೆ. ಅವಶೇಷಗಳನ್ನು ನಾವೇ ಪಡೆಯಬೇಕು ಎಂಬ ಅಭಿಪ್ರಾಯವನ್ನು ಅವರೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ವಾರ ನಾವು ದೆಹಲಿಗೆ ತೆರಳಿ ಈ ಕುರಿತ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂದು ಜಿಲಾನಿ ಹೇಳಿದ್ದಾರೆ.ರಾಮಮಂದಿರ ನಿರ್ಮಾಣ ಕಾರ್ಯ ಆರಂಭಕ್ಕೂ ಮೊದಲೇ 1992ರಲ್ಲಿ ನೆಲಸಮವಾದ ಕಟ್ಟಡದ ಅವಶೇಷಗಳನ್ನು ಅಲ್ಲಿಂದ ಸಾಗಿಸಲು ಸಮಿತಿ ಪ್ರಯತ್ನಿಸುತ್ತಿದೆ. ಇದೇ ವೇಳೆ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್​ನ ಬಾಬರಿ ಮಸೀದಿ ಘಟಕದ ಮುರ್ಖಯಸ್ಥ ಎಸ್​ಕ್ಯೂಆರ್ ಇಲಿಯಾಸ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ಕಕ್ಷಿದಾರರ ಮೂಲಕ ನಾವು ಕೂಡ ಸುಪ್ರೀಂ ಕೋರ್ಟ್​ಗೆ ಹೋಗಿ ಮಸೀದಿಯ ಅವಶೇಷಗಳನ್ನು ಮಂದಿರ ನಿರ್ಮಾಣಕ್ಕೂ ಮೊದಲೇ ಪಡೆದುಕೊಳ್ಳುತ್ತೇವೆ. ಇದಕ್ಕೆ ಅಗತ್ಯ ಕ್ರಮಗಳನ್ನು ಈಗಾಗಲೇ ನಡೆಸಿದ್ದೇವೆ ಎಂದಿದ್ದಾರೆ.ನೆಲಸಮಗೊಂಡ ಮಸೀದಿ ಅವಶೇಷ ಸುರಿಯುವುದಕ್ಕೆ ಅಯೋಧ್ಯೆಯ ಪ್ರಮುಖ ಮುಸ್ಲಿಂ ಧಾರ್ಮಿಕ ನಾಯಕ ಸಯ್ಯದ್ ಇಕ್ಲಾಕ್ ಅಹ್ಮಾಸ್ ಅಯೋಧ್ಯೆಯಲ್ಲೇ ಭೂಮಿ ಸಂಪಾದಿಸಿದ್ದು, ಅಲ್ಲೇ ಸುರಿಯಲಾಗುತ್ತದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.ಬಾಬರಿ ಮಸೀದಿ ಕೇಸ್​ನ ಪಾಲುದಾರರ ಪೈಕಿ ಒಬ್ಬರಾದ ಹಾಜಿ ಮಹ್ಬೂ ಕೂಡಾ, ಮಸೀದಿ ಅವಶೇಷ ಸುರಿಯುವುದಕ್ಕೆ ಅಯೋಧ್ಯೆಯಲ್ಲೇ ಜಮೀನು ಇದೆ ಎಂದಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
