ಮುಂಬೈ:ದೇಶದಲ್ಲೇ ಅತಿ ಹೆಚ್ಚು ಕೋವಿಡ್​ ಪ್ರಕರಣಗಳನ್ನು ಹೊಂದಿ ತೀವ್ರ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅದರಲ್ಲೂ ಮುಂಬೈನಲ್ಲಿ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಈ ಕಾರಣದಿಂದಾಗಿ ರಾಜಧಾನಿಯಲ್ಲಿ ಜಾರಿಯಲ್ಲಿದ್ದ ಬಹುತೇಕ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅಂಗಡಿಗಳನ್ನು ವಾರದ ಏಳು ದಿನವೂ ತೆರೆದಿರಬಹುದು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಇದು ಆಗಸ್ಟ್​ 5ರಿಂದ ಅನ್ವಯಿಸಲಿದೆ.
ಇದನ್ನೂ ಓದಿ;ರಾಮಮಂದಿರಕ್ಕೆ ಭೂಮಿ ಪೂಜೆ ಸಂವಿಧಾನ ವಿರೋಧಿ; ಎಡಪಕ್ಷಗಳ ವಾದವೇನು?
ವಾರದ ಎಲ್ಲ ದಿನ ರಸ್ತೆಯ ಎರಡೂ ಬದಿಯ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಬಹುದು. ಮೊದಲಿನಂತೆ ಸಮ ಮತ್ತು ಬೆಸ ಸಂಖ್ಯೆಯ ಸೂತ್ರವನ್ನು ಅನುರಿಸಬೇಕಿಲ್ಲ ಎಂದು ತಿಳಿಸಿದೆ.
ಮದ್ಯದಂಗಡಿಗಳು ಕೂಡ ಎಂದಿನಂತೆ ವ್ಯಾಪಾರ ನಡೆಸಬಹುದು. ಆದರೆ, ರಾಷ್ಟ್ರೀಯ ಮಾರ್ಗಸೂಚಿಗಳ ಪಾಲನೆ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ದೇಶದ ಬಹುತೇಕ ಕಡೆ ಜುಲೈ ಆರಂಭಕ್ಕೆ ಲಾಕ್​ಡೌನ್​ ತೆರವುಗೊಳಿಸಿದ್ದರೂ, ಮುಂಬೈ ಸೇರಿ ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಜುಲೈ 31ರವರೆಗೆ ಲಾಕ್​ಡೌನ್​ ಮುಂದುವರಿದಿತ್ತು.
26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 15 =
Remember me
