ಮುಂಬೈ:ಅಧಿಕಾರಿಯೊಬ್ಬರು ನೀರೆಂದು ತಿಳಿದು ಸ್ಯಾನಿಟೈಸರ್​ನ್ನೇ ಗಟಗಟನೆ ಕುಡಿದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಬಜೆಟ್​ ವೇಳೆಯಲ್ಲಿ ಅಧಿಕಾರಿ ಸ್ಯಾನಿಟೈಸರ್​ ಕುಡಿದಿರುವ ವಿಡಿಯೋ ವೈರಲ್​ ಆಗಿದೆ.
ಬುಧವಾರದಂದು ಬಿಎಂಸಿ ಬಜೆಟ್​ ಮಂಡನೆ ನಡೆಯುತ್ತಿತ್ತು. ಉಪ ಆಯುಕ್ತ ರಮೇಶ್​ ಪವಾರ್​ಸ, ಬಜೆಟ್​ ಮಂಡನೆಗೆ ಮೊದಲು ನೀರು ಕುಡಿಯಲು ಮುಂದಾಗಿದ್ದಾರೆ. ಟೇಬಲ್​ ಮೇಲೆ ನೀರಿನ ಬಾಟೆಲ್​ ಮತ್ತು ಸ್ಯಾನಿಟೈಸರ್​ ಬಾಟೆಲ್​ ಎರಡನ್ನೂ ಒಟ್ಟಿಗೆ ಇಟ್ಟಲಾಗಿತ್ತು. ಬಜೆಟ್​ನ ತರಾತುರಿಯಲ್ಲಿದ್ದ ಅವರು ನೀರಿನ ಬಾಟೆಲ್​ ಬದಲು ಸ್ಯಾನಿಟೈಸರ್​ ಬಾಟೆಲ್​ ಮುಚ್ಚಳ ತೆರೆದು ಕುಡಿದಿದ್ದಾರೆ. ಒಂದು ಸಿಪ್​ ಸ್ಯಾನಿಟೈಸರ್​ ಬಾಯಿಯೊಳಗೆ ಹೋಗುತ್ತಿದ್ದಂತೆ ತಾನು ಮಾಡಿದ ತಪ್ಪಿನ ಅರಿವು ಅವರಿಗಾಗಿದೆ. ಅವರ ಅಕ್ಕ ಪಕ್ಕದವರೂ ಒಮ್ಮೆಲೆ ಗಾಬರಿಯಾಗಿದ್ದು, ಅಯ್ಯಯ್ಯೋ ಅದಲ್ಲ ಸರ್​, ಇದನ್ನ ಕುಡಿಯಿರಿ ಎಂದು ನೀರಿನ ಬಾಟೆಲ್​ ಕೊಟ್ಟಿದ್ದಾರೆ.
ನೀರು ಮತ್ತು ಸ್ಯಾನಿಟೈಸರ್​ ಬಾಟೆಲ್​ ಬಹುತೇಕ ಒಂದೇ ತರ ಇತ್ತು. ಅದರಿಂದಾಗಿ ಈ ಸಮಸ್ಯೆಯಾಗಿದೆಯೆಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ನಡೆದ ಬೆನ್ನೆಲ್ಲೇ ಟೇಬಲ್​ ಮೇಲಿದ್ದ ಸ್ಯಾನಿಟೈಸರ್​ ಬಾಟೆಲ್​ನ್ನು ತೆಗೆದಿಟ್ಟಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
#WATCH: BMC Joint Municipal Commissioner Ramesh Pawar accidentally drinks from a bottle of hand sanitiser, instead of a bottle of water, during the presentation of Budget in Mumbai.pic.twitter.com/MuUfpu8wGT
— ANI (@ANI)February 3, 2021

ಮಹಿಳೆಯರ ಚೇಂಜಿಂಗ್​ ರೂಂನ ಸೀಲಿಂಗ್​ನಲ್ಲಿ ಇಣುಕುತ್ತಿದ್ದವ ದುಪ್ಪೆಂದು ಬಿದ್ದ!

ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
