ಬೆಂಗಳೂರು:ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ಕರೊನಾ ವೈರಸ್​ ದೇಹದೊಳಕ್ಕೆ ಅಡಗಿ ಕುಳಿತುಕೊಂಡಿರುವುದು ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಇಡೀ ಬೆಂಗಳೂರಿಗರನ್ನು ಕಂಗಾಲಾಗಿಸಿದೆ.
ಕಾರಣ ಏನೆಂದರೆ, ಕರೊನಾ ಸೋಂಕು ತಗುಲಿರುವುದು ಬಿಎಂಟಿಸಿ ಬಸ್​ ಚಾಲಕರೊಬ್ಬರಿಗೆ! ಲಾಕ್​ಡೌನ್​ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಕಚೇರಿಗಳು ಕಾರ್ಯ ಆರಂಭಿಸಿದ್ದು, ಸಿಬ್ಬಂದಿ ಬಸ್​ ಮೂಲಕವೇ ಕಚೇರಿಗಳಿಗೆ ಪ್ರಯಾಣಿಸುತ್ತಿದ್ದಾರೆ. ಇದರ ನಡುವೆಯೇ ಇದೀಗ ಚಾಲಕನಿಗೆ ಸೋಂಕು ತಗುಲಿರುವ ಕಾರಣ ಎಲ್ಲರೂ ದಂಗಾಗಿ ಹೋಗಿದ್ದಾರೆ.
ಇದನ್ನೂ ಓದಿ:VIDEO: ಪುಟಾಣಿಗೊಂದು ಸಲಾಂ: ಕೃತಕ ಕಾಲಿನೊಂದಿಗೆ ದಿನವೂ 10ಕಿ.ಮೀ ನಡೆಯೋದೇಕೆ ಗೊತ್ತಾ?
ಕೆ. ಆರ್. ಪುರದ ಡಿಪೋ ಸಂಖ್ಯೆ 24ರ, 500 ಬಿ ಮಾರ್ಗದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕಲಬುರಗಿ ಜಿಲ್ಲೆ ಅಪ್ಜಲ್ ಪುರದ ನಿವಾಸಿಯಾಗಿರುವ ಚಾಲಕ ಕಲಂ ನಿರ್ವಾಹಕನಿಗೆ ಯಾವುದೇ ಸೋಂಕು ಲಕ್ಷಣಗಳು ಇಲ್ಲದಿದ್ದರೂ, ಅಷ್ಟೇ ಅಲ್ಲದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಯಾವುದೇ ಸೋಂಕು ಇಲ್ಲ ಎಂದು ಖಾತ್ರಿ ಪಡೆಸಿಕೊಂಡಿದ್ದರೂ ಇದೀಗ ಸೋಂಕು ತಗಲಿರುವುದು ಇನ್ನಷ್ಟು ಭೀತಿಯದನ್ನು ಉಂಟು ಮಾಡಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ. ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ನಿಗದಿತ ಮಾನದಂಡಗಳ ಮೂಲಕ ಕೆಲಸದ ಸ್ಥಳವನ್ನು ಸೋಂಕು ರಹಿತ ದ್ರಾವಣ ಬಳಸಿ ಸ್ವಚ್ಛಗೊಳಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮುಂದಿನ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಪದಗ್ರಹಣಕ್ಕೆ ಅಂತೂ ಸಿಕ್ತು ಅನುಮತಿ: ಟ್ವಿಟರ್​ನಲ್ಲಿ ಖುಷಿ ಹಂಚಿಕೊಂಡ ಡಿಕೆಶಿ
ಈ ನಡುವೆ, ಅವರ ಸಂಪರ್ಕಕ್ಕೆ ಬಂದಿರುವ ಸಿಬ್ಬಂದಿ ಹಾಗೂ ಪ್ರಯಾಣಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ರೋಗ ಲಕ್ಷಣ ಇಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಇದುವರೆಗೆ ಯಾವುದೇ ರೀತಿಯ ಖಚಿತ ಸ್ಪಷ್ಟನೆ ಇಲ್ಲದೇ ಇರುವುದು ಕೂಡ ಇನ್ನಷ್ಟು ಗೊಂದಲಕ್ಕೆ ಈಡು ಮಾಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 2 =
Remember me
