ಮುಂಬೈ:ಇಂದು (ಜು.07) ಮಹಾರಾಷ್ಟ್ರದ ವರ್ಲಿಯಲ್ಲಿ ವೇಗದ ಮಿತಿ ಮೀರಿ ಬಂದ ಬಿಎಂಡಬ್ಲ್ಯು ಕಾರೊಂದು ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಮುಂಬೈ ನಗರದಲ್ಲಿ ವರದಿಯಾಗಿದೆ. ಬೈಕ್​ನಲ್ಲಿದ್ದ ದಂಪತಿ ವರ್ಲಿಯ ಕೋಳಿವಾಡ ಪ್ರದೇಶದ ನಿವಾಸಿಗಳಾಗಿದ್ದು, ಸಾಸೂನ್ ಡಾಕ್‌ನಿಂದ ಮೀನು ತೆಗೆದುಕೊಂಡು ಮನೆಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ಪತ್ರಿಕೆಗಳಲ್ಲಿ ಸಕಾರಾತ್ಮಕ ವಿಷಯ : ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ. ಕುಮಾರ ಹೆಗ್ಡೆ ಆಶಯ
ಘಟನೆ ನಡೆದ ಬೆನ್ನಲ್ಲೇ ವರ್ಲಿ ಪೊಲೀಸರು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದು, ಸ್ಥಳದಿಂದ ಪರಾರಿಯಾಗಿದ್ದ ಕಾರಿನ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನ ಮಾಲೀಕರು ಪಾಲ್ಘರ್‌ನ ಶಿವಸೇನೆಯ (ಶಿಂಧೆ) ಸ್ಥಳೀಯ ನಾಯಕ ರಾಜೇಶ್ ಷಾ ಎಂದು ಹೇಳಲಾಗಿದೆ. ಅಪಘಾತದ ವೇಳೆ ಚಾಲಕ ಮತ್ತು ರಾಜೇಶ್ ಷಾ ಅವರ ಪುತ್ರ ಕಾರಿನೊಳಗೆ ಇದ್ದರು ಎಂದು ಶಂಕಿಸಲಾಗಿದೆ.
ಅಪಘಾತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ಪತಿ ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ಅಪಘಾತ ಮುಂಜಾನೆ 5.30ಕ್ಕೆ ಸಂಭವಿಸಿತು. ಕಾರು ಹಿಂದಿನಿಂದ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ತಕ್ಷಣ ನಾನು ಎಡಕ್ಕೆ ಬಿದ್ದೆ. ಆದರೆ ನನ್ನ ಹೆಂಡತಿಯನ್ನು ಕಾರು 100 ಮೀ. ಎಳೆದೊಯ್ಯಿತು. ನನಗೆ ಇಬ್ಬರು ಮಕ್ಕಳಿದ್ದಾರೆ. ಏನು ಮಾಡಲಿ ನಾನು? ಇವರೆಲ್ಲಾ ದೊಡ್ಡ ವ್ಯಕ್ತಿಗಳು. ಇವರಿಗೆ ಯಾರು ಏನೂ ಮಾಡುವುದಿಲ್ಲ” ಎಂದು ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿರು,(ಏಜೆನ್ಸೀಸ್).
ವಿರಾಟ್​ ಕೊಹ್ಲಿ ಫೋನ್​ ವಾಲ್​ಪೇಪರ್​ನಲ್ಲಿರುವ ಈ ವ್ಯಕ್ತಿ ಯಾರು ಗೊತ್ತೇ? ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
