ಮುಂಬೈ:ಮಹಾರಾಷ್ಟ್ರದ ವರ್ಲಿಯಲ್ಲಿ ಭಾನುವಾರ (ಜುಲೈ 7) ನಡೆದ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಷಾನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಮಿಹಿರ್ ಷಾ ಏಕನಾಥ್ ಶಿಂಧೆ ಪಾಳಯದ ಶಿವಸೇನೆಯ ಸ್ಥಳೀಯ ನಾಯಕ ರಾಜೇಶ್ ಷಾ ಅವರ ಪುತ್ರ. ಪ್ರಕರಣದಕ್ಕೆ ಸಂಬಂಧಿಸಿದಂತೆ ಆತನ ತಂದೆಯನ್ನು ವರ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಜಾಮೀನಿನ ಮೇಲೆ ರಾಜೇಶ್​​ ಷಾ ಬಿಡುಗಡೆಯಾಗಿದ್ದಾರೆ.
ಇದನ್ನು ಓದಿ:ಅಬಕಾರಿ ನೀತಿ ಪ್ರಕರಣ; ಸಿಎಂ​ ಕೇಜ್ರಿವಾಲ್​ಗೆ ಪ್ರೊಡಕ್ಷನ್​​ ವಾರೆಂಟ್​​​ ಜಾರಿ ಮಾಡಿದ ನ್ಯಾಯಾಲಯ
ಆರೋಪಿ ಮಿಹಿರ್​ ಷಾ ತಮ್ಮ ಬಿಎಂಡಬ್ಲ್ಯು ಕಾರಿನಿಂದ ಬೈಕ್​ಗೆ ಡಿಕ್ಕಿ ಹೊಡೆದು ಬಳಿಕ ಬಾನೆಟ್​​ ಮೇಲೆ ಸಿಲುಕಿದ್ದ ಮಹಿಳೆಯನ್ನು ಸುಮಾರು ಒಂದೂವರೆ ಕಿಲೋಮೀಟರ್ ಎಳೆದೊಯ್ದಿದ್ದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ನಂತರ ಆತ ಚಾಲಕನೊಂದಿಗೆ ಸೀಟು ಬದಲಾಯಿಸಿಕೊಂಡಿದ್ದಾನೆ. ಬಳಿಕ ಚಾಲಕ ರಾಜಋಷಿ ರಾಜೇಂದ್ರ ಸಿಂಗ್​ ಬಿಡಾವತ್​​ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಡ್ರೈವ್​ ಮಾಡಿದ್ದಾರೆ. ತನಿಖೆಯ ಮೇಲೆ ಪ್ರಭಾವ ಬೀರಲು ಇದೆಲ್ಲವನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಕಾವೇರಿ ನಖ್ವಾ ಎಂಬ ಮಹಿಳೆ ಮೃತಪಟ್ಟಿದ್ದು, ಪತಿ ಪ್ರದೀಪ್ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಹಿಳೆಯ ಪತಿ ಮಾತನಾಡಿ, ಗಂಟೆಗೆ 30 ರಿಂದ 35 ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ, ವೇಗವಾಗಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಾನೆಟ್​ ಮೇಲೆ ಬಿದ್ದವು. ಚಾಲಕ ಬ್ರೇಕ್ ಹಾಕಿದ್ದರಿಂದ ನಾನು ಬಿದ್ದೆ. ನನ್ನ ಹೆಂಡತಿ ಚಕ್ರದಡಿ ಸಿಲುಕಿದಳೂ ಬಾನೆಟ್​​ ಬಡಿದು ಕಾರನ್ನು ನಿಲ್ಲಿಸುವಂತೆ ಕೇಳಿದೆ. ಆದರೆ ಅವರು ಕಾರನ್ನು ನಿಲ್ಲಿಸಲಿಲ್ಲ. ಚಾಲಕ ಬ್ರೇಕ್​ ಹಾಕಿದ್ದರೆ ನನ್ನ ಪತ್ನಿಯನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್​​)
ಖಾಲಿ ಇರುವ 35,000 ಸರ್ಕಾರಿ ಹುದ್ದೆಗೆ ಶೀಘ್ರ ನೇಮಕ; ಸಿಎಂ ಕೊಟ್ಟ ಮಾಹಿತಿಯಲ್ಲಿ ಏನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − twelve =
Remember me
