ನವದೆಹಲಿ:ಬೊಲಿವಿಯಾದಲ್ಲಿ ರಸ್ತೆಯ ತುಂಬೆಲ್ಲ ಶವಗಳು ಪತ್ತೆಯಾಗುತ್ತಿವೆ. ಪತ್ತೆಯಾಗಿರುವ ಶವಗಳ ಪೈಕಿ ಶೇ.85ಕ್ಕೂ ಹೆಚ್ಚು ಸಾವು ಕೋವಿಡ್​-19 ಸೋಂಕಿನಿಂದ ಸಂಭವಿಸಿರುವುದು ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೊಲಿವಿಯಾದ ಪೊಲೀಸರು 5 ದಿನಗಳ ಅವಧಿಯಲ್ಲಿ ಒಟ್ಟು 400ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ಕೂಚಂಬಾಂಬಾ ಒಂದರಲ್ಲೇ 191 ಶವಗಳು ಹಾಗೂ ಲಾ ಪಾಜ್​ನಲ್ಲಿ 141 ಶವಗಳು ರಸ್ತೆಯಲ್ಲಿ ಬಿದ್ದಿದ್ದು ಕಂಡುಬಂದಿದೆ. ಸಂತಾ ಕ್ರೂಜ್​ನಲ್ಲಿ 68 ಶವಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಪತ್ತೆಯಾಗಿರುವ ಶವಗಳಲ್ಲಿ ಶೇ.85ಕ್ಕೂ ಹೆಚ್ಚು ಜನರಿಗೆ ಕೋವಿಡ್​-19 ಸೋಂಕು ಇರುವುದು ಇಲ್ಲವೇ ಕರೊನಾ ವೈರಾಣು ಸೋಂಕಿನ ಲಕ್ಷಣಗಳು ಇರುವುದು ಪತ್ತೆಯಾಗಿದೆ. ಆದ್ದರಿಂದ ಅವೆಲ್ಲವನ್ನೂ ಕೋವಿಡ್​ ಶಂಕಿತ ಪ್ರಕರಣಗಳು ಎಂದು ದಾಖಲಿಸಲಾಗುತ್ತದೆ. ಇನ್ನು ಶೇ.15 ಜನರು ವಿವಿಧ ಅನಾರೋಗ್ಯ ಕಾರಣದಿಂದ ಇಲ್ಲವೇ ಹೊಡೆದಾಡಿಕೊಂಡು ಸತ್ತಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಜೈಲುಶಿಕ್ಷೆಯಿಂದ ಪಾರಾಗಲು ಸತ್ತಂತೆ ನಟಿಸಿದ, ಆದರೂ ಸಿಕ್ಕಿಬಿದ್ದ ಜಾಣ!
ಬೊಲಿವಿಯಾದಲ್ಲೇ ಸಾಂತಾ ಕ್ರೂಜ್​ ಪ್ರದೇಶದಲ್ಲಿ ಗರಿಷ್ಠ ಕೋವಿಡ್​-19 ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶದಲ್ಲೇ ಒಟ್ಟು 60 ಸಾವಿರಕ್ಕೂ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೀಗ ಕೂಚಂಬಾಂಬಾ ಮತ್ತು ಲಾ ಪಾಜಾ ಪ್ರದೇಶಗಳಲ್ಲಿ ಸೋಂಕು ತೀವ್ರವಾಗಿ ಹಬ್ಬತ್ತಿರುವ ವರದಿಗಳು ಲಭ್ಯವಾಗುತ್ತಿವೆ ಎಂದು ಹೇಳಿದ್ದಾರೆ.
ಬೊಲಿವಿಯಾದ ವಿಧಿವಿಜ್ಞಾನ ತನಿಖಾ ಸಂಸ್ಥೆಯ ನಿರ್ದೇಶಕ ಆಂಡ್ರೆಸ್​ ಫ್ಲೋರೆಸ್​ ಪ್ರಕಾರ ಏಪ್ರಿಲ್​ 1ರಿಂದ ಜುಲೈ 19ರವರೆಗೆ ರಸ್ತೆ ಬದಿಗಳಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ಇವರೆಲ್ಲರೂ ಕೋವಿಡ್​ನಿಂದ ಸತ್ತಿರುವ ಶಂಕೆ ಇದೆ ಎಂದು ಹೇಳಿದ್ದಾರೆ.
ರಾಮ ರಾಜ್ಯ ಸ್ಥಾಪನೆಯ ಭರವಸೆ ನೀಡಿ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ…: ರಾಹುಲ್ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
