ಮುಂಬೈ:ಸುಮಾರು 70 ಸಾವಿರ ಕರೊನಾ ಸೋಂಕಿತರು… ಗುಣಮುಖರಾದವರು ಒಬ್ಬರೂ ಇಲ್ಲ… 2286 ಸಾವು… ದಿನದಿಂದ ದಿನಕ್ಕೆ ಏರುತ್ತಲೇ ಇರುವ ಸೋಂಕಿತರು ಹಾಗೂ ಸಾವಿನ ಪ್ರಮಾಣ…
ಇದು ಸದ್ಯ ಮಹಾರಾಷ್ಟ್ರದ ಪರಿಸ್ಥಿತಿ. ಈ ಪೈಕಿ ಮುಂಬೈ ಒಂದರಲ್ಲಿಯೇ ಪ್ರತಿದಿನವೂ ಕನಿಷ್ಠ 500 ಹೊಸ ಸೋಂಕಿತರು ಹುಟ್ಟಿಕೊಳ್ಳುತ್ತಲೇ ಇದ್ದು, ಅದೇ ವೇಗದಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಇಲ್ಲಿ ಇದುವರೆಗೆ ಯಾವುದೇ ರೋಗಿ ಗುಣಮುಖರಾಗಿಲ್ಲ!
ಇದನ್ನೂ ಓದಿ:ಕರೊನಾ, ಅಂಫಾನ್​ ನಡುವೆಯೇ ಈಗ ಅಬ್ಬರಿಸಲಿದೆ ‘ನಿಸರ್ಗ’! ರಾಜ್ಯದ ಮೇಲೂ ಪರಿಣಾಮ
ಇಂಥ ಪರಿಸ್ಥಿತಿ ಎದುರಿಸುತ್ತಿರುವ ಮುಂಬೈನ ಆಸ್ಪತ್ರೆಗಳು ಈಗ ಅಕ್ಷರಶಃ ಮೃತ್ಯುಕೂಪವಾಗಿದೆ. ಆಸ್ಪತ್ರೆಗಳಲ್ಲಿ ಎಲ್ಲಿ ನೋಡಿದರೂ ಶವಗಳ ರಾಶಿರಾಶಿಯಾಗಿದೆ. ಕರೊನಾ ಸೋಂಕಿನ ಭೀತಿಯಿಂದ ಕುಟುಂಬದವರು ಕೂಡ ಶವ ಪಡೆಯಲು ಮುಂದೆ ಬರದ ಕಾರಣ, ಅವು ಅನಾಥವಾಗಿ ಬಿದ್ದುಕೊಂಡಿವೆ.
ಹೊಸ ಸೋಂಕಿತರು ಬಂದರೆ ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಇಲ್ಲದೇ 15-16 ಗಂಟೆ ಕಾಯುವ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ಎಷ್ಟೋ ಸೋಂಕಿತರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂತಾಗಿದ್ದು, ಆವರಣದ ತುಂಬೆಲ್ಲಾ ಕುಳಿತುಕೊಳ್ಳುತ್ತಿದ್ದಾರೆ.
ಇದು ಮಹಾರಾಷ್ಟ್ರದ ಅನೇಕ ಆಸ್ಪತ್ರೆಗಳ ಮಾತಾದರೂ ಮುಂಬೈನ ಪರಿಸ್ಥಿತಿಯಂತೂ ಹೇಳದಷ್ಟು ಶೋಚನೀಯವಾಗಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​
ಅದೇ ಇನ್ನೊಂದೆಡೆ, ವೈದ್ಯರು, ದಾದಿಯರ ಸ್ಥಿತಿಯೂ ಅಯೋಮಯವಾಗಿದೆ. ದಿನದ 24 ಗಂಟೆಗಳು ಸ್ವಲ್ಪವೂ ವಿರಮಿಸದೇ ಕೆಲಸ ಮಾಡುತ್ತಿದ್ದರೂ ಸೋಂಕಿತರು ಗುಣಮುಖರಾಗುವ ಲಕ್ಷಣಗಳೇ ತೋಚುತ್ತಿಲ್ಲ.
ಎಲ್ಲಾ ವಾರ್ಡ್‌ಗಳು ಹೌಸ್‌ಫ‌ುಲ್‌ ಆಗಿಬಿಟ್ಟಿವೆ, ಆಸ್ಪತ್ರೆಗಳ ತುಂಬೆಲ್ಲಾ ಶವಗಳು ಇವೆ. ಶವಗಳಿಗೆ ಸಂಬಂಧಿಸಿದ ಕಾಗದ ಪತ್ರಗಳೂ ಸಿದ್ಧವಾಗಿವೆ. ಆದರೆ, ಸೋಂಕು ತಗುಲುವ ಭಯದಿಂದ ಕುಟುಂಬಸ್ಥರು ಆಸ್ಪತ್ರೆಗಳತ್ತ ಬರುತ್ತಲೇ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಕಿಂಗ್‌ ಎಡ್ವರ್ಡ್‌ ಸಾರ್ವಜನಿಕ ಆಸ್ಪತ್ರೆಯ ವೈದ್ಯರು.
ಕರ್ನಾಟಕದಲ್ಲಿ ಕೂಡ ಮುಂಬೈನಿಂದ ವಾಪಸ್​ ಬಂದಿರುವವರಲ್ಲಿಯೇ ಅತ್ಯಧಿಕ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ!(ಏಜೆನ್ಸೀಸ್​)
‘ಇಂಡಿಯಾ’ ಬೇಡ, ‘ಭಾರತ’ ಬೇಕು: ಸುಪ್ರೀಂಕೋರ್ಟ್​ನಲ್ಲಿ ಇಂದು ವಿಚಾರಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
