ವಾರಂಗಲ್ (ತಮಿಳುನಾಡು):ಇಲ್ಲಿಯ ಸಮೀಪದ ಗೋರೆಕುಂಟ ಗ್ರಾಮದ ಬಾವಿಯಲ್ಲಿ ಒಂಬತ್ತು ಮಂದಿಯ ಮೃತ ದೇಹ ಪತ್ತೆಯಾಗಿದ್ದು, ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಇವರ ಪೈಕಿ ಐವು ಮಂದಿ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಇವರೆಲ್ಲಾ ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ. ಆಲಮ್​ ಅವರ ಕುಟುಂಬ ಇದಾಗಿದ್ದು, ಹೆಂಡತಿ, ಇಬ್ಬರು ಮಕ್ಕಳು ಮತ್ತು ಮೂರು ವರ್ಷದ ಮೊಮ್ಮಗ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪಿಒಕೆ ಭಾರತದ್ದೇ ಎಂದು ಒಪ್ಪಿಕೊಂಡುಬಿಟ್ಟಿತಾ ಪಾಕ್​? ವೆಬ್​ಸೈಟ್​ನಲ್ಲಿ ಹಾಕೇ ಬಿಟ್ಟಿತು ಮಾಹಿತಿ!
ನಾಲ್ಕು ಶವ ಗುರುವಾರ ಪತ್ತೆಯಾಗಿತ್ತು, ಇಬ್ಬರು ಮಹಿಳೆಯರು ಸೇರಿ ಮೂರು ಮಂದಿಯ ಶವ ಇಂದು ಪತ್ತೆಯಾಗಿದೆ.
ವಲಸೆ ಕಾರ್ಮಿಕರಾಗಿದ್ದ ಎಲ್ಲರೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಇವರ ಮೈಮೇಲೆ ಯಾವ ಗಾಯದ ಗುರುತುಗಳೂ ಇಲ್ಲ. ಈ ಹಿನ್ನೆಲೆಯಲ್ಲಿ ಇದು ಕೊಲೆ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಇದನ್ನೂ ಓದಿ:ಲಾಕ್​ಡೌನ್​ನಲ್ಲಿ ಆಶ್ರಯ ಕೋರಿ ಸ್ನೇಹಿತನ ಮನೆಗೆ ಬಂದ- ಅವನ ಪತ್ನಿಯ ನೋಡಿದ… ಮುಂದೆ ಎಲ್ಲವೂ ಅಲ್ಲೋಲ ಕಲ್ಲೋಲ…
ಕಳೆದ 20 ವರ್ಷಗಳಿಂದ ಕುಟುಂಬ ಗೀಸಿಕೊಂಡ ಮಂಡಲದ ಗೊರೆಕುಂಟ ಪ್ರದೇಶದಲ್ಲಿ ವಾಸವಿದ್ದರು. ಅವರೆಲ್ಲರೂ ಸೆಣಬಿನ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.ಲಾಕ್‌ಡೌನ್ ಘೋಷಣೆಯಾದ ಬಳಿಕ ಮಿಲ್‌ನಲ್ಲಿರುವ ಕೊಠಡಿಯೊಂದರಲ್ಲಿ ಇವರು ವಾಸಿಸುತ್ತಿದ್ದರು. ಸಾವಿಗೆ ಆರ್ಥಿಕ ಸಂಕಷ್ಟವೇ ಕಾರಣ, ಅದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
