ಚಂಡೀಗಢ:ಇತ್ತೀಚೆಗೆ ದೇಶದಲ್ಲಿ ಕುಸಿದು ಬಿದ್ದು, ಹೃದಯಾಘಾತಕ್ಕೆ ಒಳಗಾಗಿ ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಆ ಪಟ್ಟಿಗೆ ಇನ್ನೊಂದು ಸಾವೂ ಸೇರಿದೆ. ಬಾಡಿಬಿಲ್ಡರ್​ವೊಬ್ಬರು ಜಿಮ್​ನಲ್ಲಿ ಸ್ನೇಹಿತರ ಜತೆ ಮಾತನಾಡುತ್ತಿರುವಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.
ಚಂಡೀಗಢದಲ್ಲಿ ಈ ಪ್ರಕರಣ ಸಂಭವಿಸಿದ್ದು, ರಾಮ್​ ರಾಣಾ (33) ಸಾವಿಗೀಡಾದ ಬಾಡಿಬಿಲ್ಡರ್​. ಜಿಮ್​ನಲ್ಲಿ ವರ್ಕೌಟ್ ಮಾಡಿದ ಬಳಿಕ ಸ್ನೇಹಿತರ ಜತೆ ಮಾತನಾಡುತ್ತ ಹಿಂದಕ್ಕೆ ಬಾಗಿದ್ದು, ಹಾಗೇ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರೂ ವೈದ್ಯರು ಆತ ಅದಾಗಲೇ ಮೃತಪಟ್ಟಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಸಾವಿಗೀಡಾದ 33 ವರ್ಷದ ಬಾಡಿಬಿಲ್ಡರ್​ಗೆ ಪತ್ನಿ ಹಾಗೂ 11 ವರ್ಷ ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಹೀಗೆ ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಮೊನ್ನೆಮೊನ್ನೆಯಷ್ಟೇ 18 ವರ್ಷದ ಮಾರ್ಷಲ್ ಆರ್ಟ್​ ಸ್ಟಾರ್​​ ಎನಿಸಿಕೊಂಡಿರುವ ಯುವತಿಯೊಬ್ಬಳು ಕೂಡ ಹಠಾತ್ ಸಾವಿಗೀಡಾಗಿದ್ದಳು. –ಏಜೆನ್ಸೀಸ್
‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ!

ನಾಯಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಕಳ್ಕೊಂಡ ಸ್ವಿಗ್ಗಿ ಡೆಲಿವರಿ ಬಾಯ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − two =
Remember me
