ಬೆಂಗಳೂರು:ಬಾಡಿ ಬಿಲ್ಡರ್​ ಆಗಿಯೇ ಈತ ಮುಂದುವರೆಯುತ್ತದ್ದರೆ ಒಂದಷ್ಟು ಒಳ್ಳೆಯ ಹೆಸರು ಕಮಾಯಿಸುತ್ತಿದ್ದನೋ ಏನೋ. ಆದರೆ ಐಷಾರಾಮಿ ಬದುಕಿನ ಆಸೆಯಿಂದಾಗಿ ಮಿಸ್ಟರ್​ ಆಂಧ್ರಪ್ರದೇಶ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಗಿರಿನಗರ ಪೊಲೀಸರು ಇಬ್ಬರು ಅಂತರ್ ರಾಜ್ಯ ಖದೀಮರಾದ ಆಂಧ್ರ ಮೂಲದ ಸೈಯದ್ ಬಾಷ, ಶೇಖ್ ಅಯೂಬ್​ರನ್ನು ಬಂಧಿಸಿದ್ದಾರೆ. ಬಂಧಿತ ಸೈಯದ್ ಬಾಷಾ ದೇಹದಾರ್ಡ್ಯ ಪಟುವಾಗಿದ್ದ. ನಂತರ ಶೇಖ್ ಅಯೂಬ್ ಜೊತೆ ಸೇರಿ ಕಳ್ಳತನದ ಹಾದಿ ಹಿಡಿದಿದ್ದ‌. ಇವರ ಮೇಲೆ ಈಗಾಗಲೇ ಆಂಧ್ರದಲ್ಲಿ 32 ಪ್ರಕರಣಗಳು ದಾಖಲಾಗಿವೆ.
ಈ ಹಿಂದೆಯೂ ಆಂಧ್ರ ಪೊಲೀಸರು ಇವರನ್ನು ಅರೆಸ್ಟ್ ಮಾಡಿ ಕಂಬಿ ಎಣಿಸುವಂತೆ ಮಾಡಿದ್ದರು. ಆದರೆ ಬೇಲ್ ಪಡೆದ ಇವರು ಜೈಲಿನಿಂದ ಹೊರ ಬಂದು ಬೆಂಗಳೂರಿನಲ್ಲಿ ತಮ್ಮ ಕೈಚಳಕವನ್ನು ತೋರಿಸತೊಡಗಿದ್ದರು.
ಇವರು ಐಷಾರಾಮಿ ಜೀವನ ನಡೆಸಲು ಸರಗಳ್ಳತನಕ್ಕೆ ಇಳಿದಿದ್ದರು ಎನ್ನಲಾಗಿದ್ದು ದ್ವಿಚಕ್ರ ವಾಹನದ ಮೇಲೆ ಬಂದು ಸರ ಎಗರಿಸಿ ಪರಾರಿಯಾಗುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ ತಿಂಗಳು ಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಚಿನ್ನದ ಸರ ಎಗರಿಸಿದ್ದರು.
ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ‌ ಮಾಡಿದ್ದರು. ಸದ್ಯ ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನದ ಸರಗಳು,ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು ಗಿರಿನಗರ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 20 =
Remember me
