ಕೋಲ್ಕತ:ಕತ್ತು ಸೀಳಿರುವ, ಹಲ್ಲು ಮುರಿದಿರುವ ಭೀಕರ ಸ್ಥಿತಿಯಲ್ಲಿ ಎಂಟು ವರ್ಷದ ಬಾಲಕಿಯ ಶವವೊಂದು ಪತ್ತೆಯಾಗಿದ್ದು, ಅತ್ಯಾಚಾರವೂ ನಡೆದಿರುವ ಕುರಿತು ಶಂಕೆ ಕೂಡ ವ್ಯಕ್ತವಾಗಿದೆ. ಹೀಗೊಂದು ರೀತಿಯಲ್ಲಿ ಕಳೇಬರ ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ಕೋಲ್ಕತದ ಜೋರಾಬಗನ್ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಈ ಶವ ಪತ್ತೆಯಾಗಿದೆ. ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಕಲೆಹಾಕಿ ಸುಳಿವು ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಲಕಿ ಸೋವಾಬಜಾರ್ ಎಂಬ ಪ್ರದೇಶದ ನಿವಾಸಿ. ಶವದ ಮೇಲಿನ ಬಟ್ಟೆಗಳು ಹರಿದುಹೋಗಿದ್ದು, ಕತ್ತು ಸೀಳಲಾಗಿದೆ, ಹಲ್ಲು ಮುರಿಯಲಾಗಿದೆ. ದೇಹ ಪತ್ತೆಯಾದ ಸ್ಥಿತಿ ಹಾಗೂ ಸಂಬಂಧಿತ ಲಕ್ಷಣಗಳನ್ನು ಗಮನಿಸಿರುವ ಪೊಲೀಸರು ಅತ್ಯಾಚಾರ ಕೂಡ ನಡೆದಿರುಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…
ಮೃತ ಪಟ್ಟಿರುವ ಬಾಲಕಿ ಆಕೆಯ ಪಾಲಕರ ಮೂವರು ಮಕ್ಕಳಲ್ಲಿ ಕಿರಿಯವಳು. ಮೂರನೇ ಕ್ಲಾಸ್​ನ ಈ ಬಾಲಕಿ ಜೋರಾಬಗನ್​ನಲ್ಲಿರುವ ಅಜ್ಜಿ ಮನೆಗೆ ತನ್ನ ಇಬ್ಬರು ಸಹೋದರಿಯರೊಂದಿಗೆ ಬುಧವಾರ ತೆರಳಿದ್ದಳು. ಬೇರೆ ಮಕ್ಕಳೊಂದಿಗೆ ರಸ್ತೆಯಲ್ಲಿ ಆಡುತ್ತಿದ್ದ ತಂಗಿಯನ್ನು ರಾತ್ರಿ 7.45ಕ್ಕೆ ಕೊನೆಯದಾಗಿ ಕಂಡಿದ್ದಾಗಿ ಸಹೋದರಿಯರು ಹೇಳಿದ್ದಾರೆ. ಎಂಟು ಗಂಟೆ ಹೊತ್ತಿಗೆ ಆಕೆ ಎಲ್ಲಿಯೂ ಕಾಣದಿದ್ದಾಗ ಹುಡುಕಾಡಿದೆವು, ಆದರೆ ಅವಳು ಅಷ್ಟರಲ್ಲಾಗಲೇ ನಾಪತ್ತೆಯಾಗಿದ್ದಳು, ಏನಾಯಿತು ಎಂಬುದು ಗೊತ್ತಾಗಿಲ್ಲ ಎಂಬುದಾಗಿ ಮನೆಯವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nine =
Remember me
