ಭುವನೇಶ್ವರ್​:ಅಂಗನವಾಡಿ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಬಾಲಸೋರ್​ ಜಿಲ್ಲೆಯ ಖಾಂತಪದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಮಹಾರಾಜಪುರ್​ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ.
ಮೃತಳನ್ನು ಪ್ರಜ್ಯನಾ ಪರಿಮಿತ ದಾಸ್​ ಎಂದು ಗುರುತಿಸಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ ಪರಿಮಿತ ದಾಸ್​ ಎಂದಿನಂತೆ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ತೆರಳಿದಳು. ಸಂಜೆ ಎಲ್ಲರು ಮನೆಗೆ ಹೋದರು ಆಕೆ ಮಾತ್ರ ಮನೆಗೆ ಹಿಂತಿರುಗದನ್ನು ಗಮನಿಸಿ ಆಕೆಯ ಪತಿ ಬಿಸ್ಮಿತ್​ ರಂಜನ್​ ದಾಸ್​, ಅಂಗನವಾಡಿ ಕೇಂದ್ರಕ್ಕೆ ತೆರಳಿ ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿಯನ್ನು ನೋಡಿ ಶಾಕ್​ಗೆ ಒಳಗಾಗಿದ್ದಾನೆ.
ತಕ್ಷಣ ಆಕೆಯನ್ನು ಖಾಂತಪದ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು. ಕೌಟುಂಬಿಕ ಸಮಸ್ಯೆಗಳಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆಕೆಯ ಗಂಡ ಬಿಸ್ಮಿತ್ ಮದ್ಯವ್ಯಸನಿ ಮತ್ತು ಅವನ ಹೆತ್ತವರು ಆಕೆಯನ್ನು ಹಿಂಸಿಸುತ್ತಿದ್ದರು ಹಾಗೂ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ನೆಟ್​ ಬೌಲರ್​ಗಳು ಬೇಕಾಗಿದ್ದಾರೆ! ಭಾರತೀಯರಿಗಾಗಿ ನೆದರ್ಲೆಂಡ್​ ತಂಡದಿಂದ ವಿಶೇಷ ಅವಕಾಶ…
ಪರಿಮಿತ ದಾಸ್​ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿರಲಿಲ್ಲ. ನನ್ನ ಮಗಳು ಮಾನಸಿಕವಾಗಿ ತುಂಬಾ ಶಕ್ತಿಯುತಳಾಗಿದ್ದಳು. ಆಕೆಯ ಪತಿ ಮದ್ಯವ್ಯಸನಿ ಮತ್ತು ಆಕೆಯ ಅತ್ತೆ ದುಷ್ಟ ಮಹಿಳೆ. ಅವರು ನನ್ನ ಮಗಳನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಮೃತಳ ತಾಯಿ ಸರಸ್ವತಿ ದಾಸ್ ಆರೋಪಿಸಿದ್ದಾರೆ.
ಮೃತಳ ತಂದೆ ಬಿದ್ಯಧರ ದಾಸ್ ಮಾತನಾಡಿ, ನನ್ನ ಮಗಳು ಪ್ರೇಮ ವಿವಾಹವಾಗಿದ್ದಳು. ಆದರೆ, ನನ್ನ ಅಳಿಯ ಮದ್ಯವ್ಯಸನಿಯಾಗಿದ್ದ ಮತ್ತು ಅವನ ಕುಟುಂಬವು ನನ್ನ ಮಗಳನ್ನು ಎಂದಿಗೂ ಇಷ್ಟಪಡಲಿಲ್ಲ. ಅವರೆಲ್ಲ ಸೇರಿ ನನ್ನ ಮಗಳ ದೇಹವನ್ನು ನೇಣು ಹಾಕುವ ಮೊದಲು ಕೊಂದಿದ್ದಾರೆ ಅಥವಾ ಅವರ ಹಿಂಸೆಯ ಕಾರಣದಿಂದಾಗಿ ಅವಳೇ ನೇಣು ಹಾಕಿಕೊಂಡಿದ್ದಾಳೆ. ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸಾವಿನ ಬಗ್ಗೆ ಮಾಹಿತಿ ಪಡೆದ ಖಾಂತಪದ ಪೊಲೀಸರು ಸ್ಥಳಕ್ಕಾಗಮಿಸಿ ಬಿಸ್ಮಿತ್ ಹಾಗೂ ಆತನ ತಾಯಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಭಾರತ-ಪಾಕ್​ ನಡುವಿನ ಏಷ್ಯಾಕಪ್​ ಪಂದ್ಯದ ಮೀಸಲು ದಿನಕ್ಕೆ ವಿಶೇಷ ನಿಯಮ!

ಪ್ರೊ ಕಬಡ್ಡಿ ಲೀಗ್​ ಆಟಗಾರರ ಹರಾಜು ಪ್ರಕ್ರಿಯೆಯ ಪರಿಷ್ಕೃತ ದಿನಾಂಕ ಪ್ರಕಟ

ಟಿ20-ಟೆಸ್ಟ್​ಗೆ ಎರಡೂವರೆ ತಿಂಗಳು ರಜೆ; ಇನ್ನು ಬರೀ ಒನ್​ಡೇ ಮ್ಯಾಚು ಕಣೋ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − sixteen =
Remember me
