ನವದೆಹಲಿ:ಹೆಸರಾಂತ ಕುಸ್ತಿಪಟುಗಳು ತನಗೆ 50 ಲಕ್ಷ ರೂ. ವಂಚಿಸಿದ್ದಾರೆ ಎಂದು ದೆಹಲಿಯ ತಿಹಾರ್​ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆದ ದೀಪಕ್ ಶರ್ಮಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ: ಜಿಪಂ ಉಪಕಾರ್ಯದರ್ಶಿ ಎಂ.ಬಾಬು ಹೇಳಿಕೆ
ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಕ್ ಶರ್ಮಾ, ಹೆಸರಾಂತ ವೃತ್ತಿಪರ ಕುಸ್ತಿಪಟುಗಳಾದ ರೌನಕ್ ಗುಲಿಯಾ ಮತ್ತು ಅವರ ಪತಿ ಅಂಕಿತ್ ಗುಲಿಯಾ ತನಗೆ ಹೂಡಿಕೆಯ ಹೆಸರಿನಲ್ಲಿ 50 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
“ರಾಜ್ಯ ಕುಸ್ತಿ ಚಾಂಪಿಯನ್ ಆಗಿರುವ ರೌನಕ್ ಗುಲಿಯಾ ನನಗೆ ಡಿಸ್ಕವರಿ ಚಾನೆಲ್‌ನ ‘ಇಂಡಿಯಾಸ್ ಅಲ್ಟಿಮೇಟ್ ವಾರಿಯರ್’ ಎಂಬ ರಿಯಾಲಿಟಿ ಶೋನಲ್ಲಿ ಪರಿಚಯವಾದರು. ಆಕೆ ಮತ್ತು ಆಕೆಯ ಪತಿ ಇಬ್ಬರು ನಮ್ಮದೇ ಆರೋಗ್ಯ ಉತ್ಪನ್ನವಿದೆ. ಅದಕ್ಕೆ ಹೂಡಿಕೆದಾರರ ಅಗತ್ಯವಿದೆ. ನೀವು ಇನ್ವೆಸ್ಟ್​ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಭರವಸೆ ಮಾತುಗಳ್ಳನಾಡಿದರು” ಎಂದು ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಸಬಲೀಕರಣಕ್ಕೆ ಸ್ವ ಉದ್ಯೋಗ ಅತ್ಯಗತ್ಯ: ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ ಅಭಿಮತ
“ಆರೋಗ್ಯ ಉತ್ಪನ್ನ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ 50 ಲಕ್ಷ ರೂ. ಪಡೆದುಕೊಂಡರು. ನಂತರದಲ್ಲಿ ಅದನ್ನು ನನಗೆ ಹಿಂದಿರುಗಿಸದೆ, ವಂಚಿಸಿದ್ದಾರೆ” ಎಂದು ಶರ್ಮಾ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ದೆಹಲಿಯ ಮಧು ವಿಹಾರ್ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ತನಿಖೆ ನಡೆಸುತ್ತಿದ್ದು, ದಂಪತಿ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).
ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಪ್ರೇಕ್ಷಕರಿಗೆ ‘ಬೈ 1 ಗೆಟ್​ 1’ ಆಫರ್​ ಘೋಷಿಸಿದ ‘ಬಾಯ್ಸ್​ ಹಾಸ್ಟೆಲ್’​ ನಿರ್ಮಾಪಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
