ಬೆಂಗಳೂರು:ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವೇನಲ್ಲ. ಎಷ್ಟೋ ಜನ ಹಗಲಿರುಳು ಓದಿ ಐಎಎಸ್​​, ಐಆರ್​ಎಸ್, ಐಎಫ್​ಎಸ್​​ ಹುದ್ದೆಗೆ ಏರುವ ಕನಸು ಕಾಣುತ್ತಾರೆ. ಆದೆರೆ ರವಿ ಕಪೂರ್ ಎನ್ನುವವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸಾಗಿ ಪಡೆದಿದ್ದ ಐಆರ್​ಎಸ್Indian Revenue Service (Income Tax)ಹುದ್ದೆಯನ್ನು ತ್ಯಜಿಸಿ, ಭವಿಷ್ಯದ ಅಧಿಕಾರಿಗಳನ್ನು ರೂಪಿಸುತ್ತಿದ್ದಾರೆ.
ಶೈಕ್ಷಣಿಕವಾಗಿ ಅಷ್ಟೇನೂ ಚುರುಕಿಲ್ಲದ ರವಿಕುಮಾರ್ ದಪ್ಪಗಿದ್ದರೆಂದು ಚಿಕ್ಕಂದಿನಿಂದಲೂ ಅವಮಾನ ಅನುಭವಿಸಿದ್ದರು. ದೇಹದ ತೂಕವನ್ನು ಇಳಿಸಿಕೊಳ್ಳುವ ಪಯಣದಲ್ಲಿ ಬಾಡಿ ಬಿಲ್ಡರ್ ಆಗಿ ಕ್ರೀಡೆಯ ಕುರಿತು ಅಪಾರ ಆಸಕ್ತಿ ಬೆಳೆಸಿಕೊಂಡರು. 2008ರಲ್ಲಿ ಮಿಸ್ಟರ್ ದೆಲ್ಲಿ ಕಿರೀಟ ಪಡೆದ ಇವರು 2009ರಲ್ಲಿ ದೆಹಲಿ ರಗ್ಬಿ ಕ್ಲಬ್​ಗೆ ಸೇರಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿದರು.
ರಗ್ಬಿ ಪಂದ್ಯಾವಳಿಯೊಂದರ ಸಮಯದಲ್ಲಿ ನಡೆದ ಅಹಿತಕರ ಘಟನೆಯೊಂದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹುಟ್ಟಿಸಿತು. ಯಾರ ಮಾರ್ಗದರ್ಶನವೂ ಪಡೆಯದೇ ಶ್ರಮವಹಿಸಿ ಓದಿ ರವಿ ಕಪೂರ್ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಐಆರ್​ಎಸ್ ಅಧಿಕಾರಿಯಾಗಿ ಕರ್ತವ್ಯ ಪ್ರಾರಂಭಿಸಿದ ರವಿ ಇನ್ನಷ್ಟು ಸಾಧನೆಗೈದರು. 2017ರಲ್ಲಿ ಗ್ಲೋಬಲ್ ಪವರ್​ಲಿಫ್ಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಗೆದ್ದು ಬೀಗಿದರು. ತಮ್ಮಂತೆಯೇ ಯುಪಿಎಸ್​ಸಿ ಪರೀಕ್ಷೆಯ ಕನಸು ಹೊತ್ತವರಿಗೆ ಸಹಕಾರವಾಗಲೆಂದು ಪುಸ್ತಕ ಮತ್ತು ಬ್ಲಾಗ್​ಗಳ ಮೂಲಕ ಸಲಹೆಗಳನ್ನು ನೀಡಲಾರಂಭಿಸಿದರು.
ಯುಪಿಎಸ್​ಸಿ ಪರೀಕ್ಷಾರ್ಥಿಗಳು ಇದರಿಂದ ಉತ್ತೇಜಿತರಾಗಿ ಇನ್ನಷ್ಟು ಸಲಹೆಗಳನ್ನು ಕೇಳರಾಂಭಿಸಿದಾಗ ಹೊಸ ಯೋಚನೆಯೊಂದು ಹುಟ್ಟಿಕೊಂಡಿತು. ಒಳ್ಳೆಯ ಸಂಬಳ ಬರುತ್ತಿದ್ದ ಸರ್ಕಾರಿ ನೌಕರಿಯನ್ನು ತೊರೆದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ ನೀಡಲಾರಂಭಿಸಿದರು.ರವಿ ಕಪುರ್ ವಿಶಿಷ್ಟ ತರಬೇತಿಯ ಕಾರಣ ಈ ವರ್ಷ ಸುಮಾರು 6 ವಿದ್ಯಾರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದುವರೆಗೆ ಸುಮಾರು 1.4 ಲಕ್ಷ ವಿದ್ಯಾರ್ಥಿಗಳು ಇವರಿಂದ ತರಬೇತಿ ಪಡೆದು ಹಲವು ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಸಾಧನೆಗೈದಿದ್ದಾರೆ.
ಭಾರತೀಯ ವಸ್ತ್ರ ವಿನ್ಯಾಸ ಸಂಸ್ಥೆಯ ಉಡುಪು ತೊಟ್ಟ ಬ್ರಿಟನ್ ಪ್ರಧಾನಿ ಪತ್ನಿ ಅಕ್ಷತಾ ಮೂರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 1 =
Remember me
