ನವದೆಹಲಿ:ಚೀನಾದೊಂದಿಗಿನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮನೆ ಮಾಡಿರುವಂತೆ ಅಮೆರಿಕದ ಏರೋಸ್ಪೇಸ್​ ಕಂಪನಿ ಬೋಯಿಂಗ್​ ಭಾರತಕ್ಕೆ 5 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ಗಳನ್ನು ಸರಬರಾಜು ಮಾಡಿದೆ. ಇದು ಭಾರತ ಖರೀದಿಸಲು ಬಯಸಿದ್ದ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ನ ಕೊನೆಯ ಕಂತಾಗಿದೆ.
ಈ ರೀತಿಯಾಗಿ ಬೋಯಿಂಗ್​ ಸಂಸ್ಥೆ ಭಾರತೀಯ ವಾಯುಪಡೆಗೆ ಎಲ್ಲ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ಮತ್ತು 15 ಚಿನೋಕ್​ ಮಿಲಿಟರಿ ಹೆಲಿಕಾಪ್ಟರ್​ಗಳನ್ನು ಪೂರೈಕೆ ಮಾಡಿದಂತಾಗಿದೆ.
ಇದನ್ನೂ ಓದಿ:ದನದ ಹಿಂಡು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ವಾಹನ ಪಲ್ಟಿ!
ಎಎಚ್​-64ಇ ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಬಹುಮುಖೀಯ ದಾಳಿಯಲ್ಲಿ ಬಳಸಬಹುದಾದ ಕಾಂಬ್ಯಾಟ್​​ ಹೆಲಿಕಾಪ್ಟರ್​ ಆಗಿದೆ. ಚಿನಾಕ್​ ಮಿಲಿಟರಿ ಹೆಲಿಕಾಪ್ಟರ್​ ಕೂಡ ಬಹುಮುಖೀಯ, ಲಂಬಾಕಾರವಾಗಿ ಉಡಾವಣೆಗೊಳ್ಳುವ, ಯೋಧರನ್ನು, ಶಸ್ತ್ರಾಸ್ತ್ರಗಳು, ಇಂಧನವನ್ನು ರಣಾಂಗಣಕ್ಕೆ ಸಾಗಿಸುವ ಹೆಲಿಕಾಪ್ಟರ್​ ಆಗಿದೆ.
2015ರ ಸೆಪ್ಟೆಂಬರ್​ನಲ್ಲಿ ಭಾರತೀಯ ವಾಯುಪಡೆಗಾಗಿ 22 ಅಪಾಚೆ ಮತ್ತು 15 ಚಿನೋಕ್​ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಸರ್ಕಾರ ಬೋಯಿಂಗ್​ನೊಂದಿಗೆ ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.
ಚಿನ್ನ, ಬೆಳ್ಳಿ ಆಯ್ತು..ಇದೀಗ ವಜ್ರದ ಮಾಸ್ಕ್​ಗಳ ಸರದಿ; ಸಾಮಾನ್ಯರ ಕೈಗೆಟಕುವಂಥದ್ದಲ್ಲ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seven =
Remember me
