ಮುಂಬೈ :ದಿನದಿಂದ ದಿನಕ್ಕೆ ಕರೊನಾ ಸೋಂಕು ತಗುಲುತ್ತಿರುವ ಬಾಲಿವುಡ್ ನಟ-ನಟಿಯರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮುಂಬೈನ ಜುಹೂ ನಿವಾಸಿಯಾದ ಹಿರಿಯ ನಟ ಗೋವಿಂದ ಅವರಿಗೆ ಸೋಂಕು ದೃಢಪಟ್ಟಿದೆ. ತೆಳುವಾಗಿ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೋವಿಂದ ಅವರ ಪತ್ನಿ ಸುನೀತಾ ಅಹೂಜಾ ಅವರಿಗೆ ಇತ್ತೀಚೆಗಷ್ಟೇ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು. ಇದೀಗ 57 ವರ್ಷದ ನಟ ಗೋವಿಂದ ಅವರಿಗೆ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ. ನಿರಂತರ ವೈದ್ಯರ ಸಂಪರ್ಕದಲ್ಲಿದ್ದು ರೋಗಲಕ್ಷಣಗಳ ಬಗ್ಗೆ ನಿಗಾ ವಹಿಸುತ್ತಿದ್ದೇವೆ. ಕೆಲಸದವರು ಸೇರಿದಂತೆ ಮನೆಯವರೆಲ್ಲರ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರಿಗೂ ನೆಗೆಟೀವ್ ಬಂದಿದೆ. ಇತ್ತೀಚೆಗೆ ಗೋವಿಂದ ಅವರ ನಿಕಟ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸುನೀತಾ ಹೇಳಿದ್ದಾರೆ.
ಇದನ್ನೂ ಓದಿ:ವಿರುಷ್ಕಾ ದಂಪತಿಗಳ ಪ್ರಾಣಿಪ್ರೇಮ : ಮುಂಬೈನಲ್ಲಿ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳು
ಇತ್ತೀಚೆಗೆ ಬಾಲಿವುಡ್​ ಸ್ಟಾರ್​ಗಳಾದ ಆಮೀರ್ ಖಾನ್, ಆರ್​.ಮಾಧವನ್, ಆಲಿಯಾ ಭಟ್ ಅವರಿಗೆ ಸೋಂಕು ತಗುಲಿದ್ದು ವರದಿಯಾಗಿತ್ತು. ಇಂದಷ್ಟೇ ನಟ ಅಕ್ಷಯ್​ಕುಮಾರ್ ಅವರಿಗೂ ಸೋಂಕು ದೃಢಪಟ್ಟಿದೆ.(ಏಜೆನ್ಸೀಸ್)
ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…

ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
