ಮುಂಬೈ :ಕಳೆದ ಭಾನುವಾರ ಬಾಲಿವುಡ್ ನಟ ಅರ್ಜುನ್ ರಾಮ್​ಪಾಲ್​ ಅವರು ತಮಗೆ ಕರೊನಾ ಸೋಂಕು ತಗುಲಿದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಮತ್ತೆ ಗುರುವಾರ ಎರಡು ಟೆಸ್ಟ್​ಗಳಲ್ಲಿ ಕರೊನಾ ನೆಗೆಟೀವ್ ಬಂದಿರುವುದನ್ನು ತಿಳಿಸಿ, “ದೇವರು ಕರುಣೆ ತೋರಿದ್ದಾನೆ” ಎಂದರು.
ಈ ಬಗ್ಗೆ ಇನ್ಸ್​ಟಾಗ್ರಾಂನಲ್ಲಿ ಬರೆದ ರಾಮ್​ಪಾಲ್, ತಾವು ಇಷ್ಟು ಬೇಗ ಗುಣಮುಖರಾಗಿದ್ದಕ್ಕೆ ಮುಖ್ಯ ಕಾರಣ ತಾವು ಕರೊನಾ ಲಸಿಕೆಯ ಮೊದಲನೇ ಡೋಸ್​ ಪಡೆದಿದ್ದುದು ಎಂದಿದ್ದಾರೆ. ಆದ್ದರಿಂದ ಎಲ್ಲರೂ ಸಾಧ್ಯವಾದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.


A post shared by Arjun (@rampal72)
“ನಾನು ಇಷ್ಟು ಬೇಗ ಗುಣಮುಖವಾಗಿದ್ದಕ್ಕೆ ಒಂದು ಮುಖ್ಯವಾದ ಕಾರಣ ನಾನು ಲಸಿಕೆಯ ಮೊದಲನೇ ಡೋಸ್​ ಪಡೆದಿದ್ದದ್ದು ಎಂದು ವೈದ್ಯರು ಹೇಳಿದ್ದಾರೆ. ಲಸಿಕೆಯಿಂದಾಗಿ ವೈರಲ್ ಲೋಡ್​ ಕಡಿಮೆಯಾಗಿ ರೋಗದ ಲಕ್ಷಣಗಳು ಕಾಣಿಸಲಿಲ್ಲ ಎಂದಿದ್ದಾರೆ. ನಾನು ಎಲ್ಲರನ್ನೂ ಕೇಳಿಕೊಳ್ಳುವುದೇನೆಂದರೆ, ಸಾಧ್ಯವಾದಷ್ಟು ಬೇಗ ಲಸಿಕೆ ತೆಗೆದುಕೊಳ್ಳಿ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿ” ಎಂದು ರಾಮ್​ಪಾಲ್​ ಬರೆದಿದ್ದಾರೆ.
“ಸ್ಟೇ ಪಾಸಿಟೀವ್ ಅಂಡ್ ಡೋಂಟ್ ಬಿಕಮ್ ಪಾಸಿಟೀವ್” ಎಂದಿರುವ ರಾಮ್​ಪಾಲ್, ಕರೊನಾದಿಂದ ನರಳುತ್ತಿರುವವರೊಂದಿಗೆ ನನ್ನ ಪ್ರಾರ್ಥನೆಗಳಿವೆ. ಈ ಸಮಯವೂ ಕಳೆಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
ಎಲ್ಲಾ ನಿವಾಸಿಗಳಿಗೆ ಉಚಿತ ಕರೊನಾ ಲಸಿಕೆ : ಮಹಾರಾಷ್ಟ್ರ ಸಚಿವ

ಕರೊನಾ ಮಧ್ಯೆ ಮತ್ತೊಂದು ದುರಂತ… ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದ ಕಾರ್ಮಿಕರು !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 4 =
Remember me
