ಮುಂಬೈ:ವಿದ್ಯಾವಂತ ಕುಟುಂಬದಲ್ಲಿ ದುರಹಂಕಾರ ಹೆಚ್ಚು ಅದಕ್ಕೆ ವಿಚ್ಛೇದನವಾಗುತ್ತದೆ ಎಂದು ಹೇಳಿದ್ದ ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್​ ಅವರಿಗೆ ಬಾಲಿವುಡ್​ ನಟಿ ಸೋನಮ್​ ಕಪೂರ್​ ಮಾತಿನ ತಿರುಗೇಟು ನೀಡಿದ್ದಾರೆ.
“ಯಾರೇ ಆಗಲಿ ವಿವೇಕ ಉಳ್ಳ ಮನುಷ್ಯರು ಈ ರೀತಿ ಮಾತನಾಡುವುದಿಲ್ಲ. ಮೂರ್ಖ ಹೇಳಿಕೆ ನೀಡುತ್ತಿದ್ದಾರೆ.” ಎಂದು ನಟಿ ಸೋನಮ್​ ಕಪೂರ್​ ತಮ್ಮ ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ. ಮೋಹನ್​ ಭಾಗವತ್​ ನೀಡಿದ್ದ ಹೇಳಿಕೆಯ ಸುದ್ದಿಯನ್ನು ಶೇರ್​ ಮಾಡಿರುವ ಆಕೆ ಅದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಅಹಮದಾಬಾದ್​ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಕುಟುಂಬದ ಮೌಲ್ಯವನ್ನು ತಿಳಿಸುತ್ತಿದ್ದರು. ಮಹಿಳೆಯರಿಲ್ಲದೆ ಈ ಸಮಾಜವಿಲ್ಲ. ಆದರೆ ನಾವು ಸಮಾಜದ ಬಗ್ಗೆ ಯೋಚಿಸುವುದೇ ಇಲ್ಲ, ಇದರಿಂದ ನಾವು ಉದ್ಧಾರವಾಗುವುದಿಲ್ಲ ಮತ್ತು ಸಮಾಜವೂ ಉದ್ಧಾರವಾಗುವುದಿಲ್ಲ. ಭಾರತದಲ್ಲಿ ಇರಬೇಕೆಂದರೆ ಹಿಂದೂ ಸಮಾಜದ ಹೊರೆತು ಬೇರೆ ಆಯ್ಕೆಯೇ ಇಲ್ಲ, ಹಿಂದೂ ಸಮಾಜದಲ್ಲಿ ಕುಟುಂಬದ ಹೊರೆತು ಬೇರೆ ಆಯ್ಕೆಯೇ ಇಲ್ಲ. ಭಾರತದಲ್ಲಿ ವಿದ್ಯಾವಂತರ ಕುಟುಂಬಗಳಲ್ಲಿ ಅಹಂಕಾರ ಹೆಚ್ಚುತ್ತಿರುವುದರಿಂದಲೇ ವಿಚ್ಛೇದನಗಳು ನಡೆಯುತ್ತಿವೆ.” ಎಂದು ಹೇಳಿದ್ದರು.(ಏಜೆನ್ಸೀಸ್​)
Which sane man speaks like this? Regressive foolish statementshttps://t.co/GJmxnGtNtv
— Sonam K Ahuja (@sonamakapoor)February 16, 2020

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:four × 1 =
Remember me
