ಮುಂಬೈ:ಬಾಲಿವುಡ್ ನಟಿ ದಿಯಾ ಮಿರ್ಜಾ ಬಿಸಿನೆಸ್​ಮನ್ ವೈಭವ್ ರೇಖಿ ಅವರನ್ನು ಸೋಮವಾರ (ಫೆಬ್ರವರಿ 15) ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾದರು. ಯಾವುದೇ ಸೆಲೆಬ್ರಿಟಿ ಮದುವೆಯಂತೆ ಈ ಮದುವೆಯೂ ವಿಶೇಷವಾಗೇ ಇತ್ತು. ಆದರೆ ದಿಯಾ ಮದುವೆ ಮತ್ತೂ ವಿಶೇಷವಾದುದಕ್ಕೆ ಕಾರಣ ಎಂದರೆ ಅವರಿಗೆ ಸಾತ್​ ಫೇರೆ ಮಾಡಿಸಿದವರು ಮಹಿಳಾ ಪುರೋಹಿತರು!
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆ ಮತ್ತಿತರ ಶಾಸ್ತ್ರಗಳಲ್ಲಿ ಪುರುಷರೇ ಪೌರೋಹಿತ್ಯ ನಡೆಸುವುದು ವಾಡಿಕೆ. ಆದರೆ ದಿಯಾ ಮದುವೆ ಫೋಟೋ ವೈರಲ್ ಆದಾಗ ಹಲವರು ಗಮನಿಸಿದ ಅಂಶ ಎಂದರೆ ಮಂತ್ರ ಹೇಳುತ್ತಾ ಕೂತಿದ್ದಿದ್ದು ಮಹಿಳಾ ಪುರೋಹಿತೆ. ಈ ಬಗ್ಗೆ ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ದಿಯಾ ಉತ್ತರ ನೀಡಿದ್ದಾರೆ. “ನಮ್ಮ ಮದುವೆ ಶಾಸ್ತ್ರವನ್ನು ನಡೆಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಶೀಲಾ ಅತ್ತ. ಜೊತೆಯಾಗಿ ನಾವು ಮೇಲೇಳಬಹುದು… #ರೈಸ್ ಅಪ್ #ಜನರೇಶನ್ ಈಕ್ವಾಲಿಟಿ” ಅಂತ ದಿಯಾ ಟ್ವೀಟ್ ಮಾಡಿದ್ದಾರೆ.
Thank you Sheela Atta for conducting our wedding ceremony. So proud that together we can#RiseUp#GenerationEqualityhttps://t.co/aMZdyEZRdFpic.twitter.com/BeyFWCSGLw
— Dia Mirza (@deespeak)February 17, 2021

‘ರೆಹನಾ ಹೇ ತೆರೆ ದಿಲ್ ಮೇ’ ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದ ರೂಪದರ್ಶಿ ದಿಯಾ ಮಿರ್ಜಾ ಇತ್ತೀಚೆಗೆ ಅಭಿನಯಿಸಿದ ಚಿತ್ರ ಎಂದರೆ ಅನುಭವ್ ಸಿನ್ಹಾ ಅವರ ‘ಥಪ್ಪಡ್’. ಮತ್ತೆ ಜೀ5 ವೆಬ್ ಸೀರೀಸ್ ‘ಕಾಫಿರ್’​ನಲ್ಲಿ ಅವರ ನಟನೆಗೂ ಪ್ರಶಂಸೆ ಸಿಕ್ಕಿತ್ತು.
ಇದನ್ನೂ ಓದಿ:ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !
ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ಇಬ್ಬರಿಗೂ ಇದು ಎರಡನೇ ಮದುವೆ. ಅವರು ಲಾಕ್​ಡೌನ್ ವೇಳೆ ಭೇಟಿಯಾಗಿದ್ದು, ಕ್ರಮೇಣ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಇದೀಗ ಹತ್ತಿರದ ನೆಂಟರಿಷ್ಟರನ್ನೊಳಗೊಂಡ ವಿವಾಹ ಸಮಾರಂಭದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.(ಏಜೆನ್ಸೀಸ್)
ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!

‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

ಕೆಂಪುಕೋಟೆಯ ಆವರಣದಲ್ಲಿ ಖಡ್ಗ ಝಳಪಿಸಿದ ಮನೀಂದರ್ ಸಿಂಗ್ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
