ಮುಂಬೈ:ಇತ್ತೀಚಿನ ದಿನಗಳಲ್ಲಿ ಖ್ಯಾತ ತಾರೆಯರು ಮಾರಕ ಕ್ಯಾನ್ಸರ್​ ರೋಗಕ್ಕೆ ತುತ್ತಾಗುತ್ತಿದ್ದು, ಈ ಸಾಲಿನಲ್ಲಿ ಈಗ ಒಂದು ಕಾಲದ ಖ್ಯಾತ ನಟಿ ಎನಿಸಿಕೊಂಡಿದ್ದ ಮಹಿಮಾ ಚೌಧರಿ ಸೇರ್ಪಡೆಯಾಗಿದ್ದಾರೆ.
ನಟಿ ಸೋನಾಲಿ ಬೇಂದ್ರೆ, ಪೋಷಕ ನಟಿ ಕಿರಣ್​ ಖೇರ್​ ಅವರೂ ಸಹ ತಮಗೆ ಕ್ಯಾನ್ಸರ್​ ಇದ್ದು, ಈ ಮಾರಕ ರೋಗದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಅಂತೆಯೇ ಈ ಇಬ್ಬರು ನಟಿಯರು ಕ್ಯಾನ್ಸರ್​ ಗೆದ್ದು, ಸದ್ಯ ಸಹಜ ಜೀವನ ಸಾಗಿಸುತ್ತಿದ್ದಾರೆ.
ಆದರಿಗ ಪರ್ದೇಸ್​​ ಖ್ಯಾತಿಯ 1997ರಲ್ಲಿ ಶಾರುಖ್​ ಖಾನ್​​ ಅವರಿಗೆ ನಾಯಕಿಯಾಗಿ ನಟಿಸಿದ್ದ ಮಹಿಮಾ ಚೌಧರಿ ಈಗ ಬ್ರೆಸ್ಟ್​ ಕ್ಯಾನ್ಸರ್​ನಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಿಮೋ ಥೆರಪಿಗೆ ಒಳಗಾಗಿರುವ ಮಹಿಮಾ ಅವರ ತಲೆಕೂದಲು ಚಿಕ್ಕದಾಗಿದ್ದು, ತಾವು ಇದರ ವಿರುದ್ಧ ಧೈರ್ಯವಾಗಿಯೇ ಹೋರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮೊದಲ ಹಂತವಾಗಿ ಕಿಮೋ ಥೆರಪಿ ತೆಗೆದುಕೊಂಡಿರುವ ಮಹಿಮಾ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಹಿರಿಯ ನಟ ಅನುಪಮ್​ ಖೇರ್​, ನನ್ನ 525ನೇ ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ಮಾಡಲು ಮಹಿಮಾ ಚೌಧರಿ ಅವರಿಗೆ ಕರೆ ಮಾಡಿದ್ದೇ, ಆಗ ನನಗೆ ತಿಳಿಯಿತು ಇವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು, ಆನಂತರ ಈ ಬಗ್ಗೆ ಚರ್ಚೆ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ.
ಸದ್ಯ ಧೈರ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಹಿಮಾ ಅವರು ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ. ಆಕೆ ನನ್ನ ನಾಯಕಿಯಂತೆ ಹೋರಾಡುತ್ತಿದ್ದಾಳೆ. ಸ್ನೇಹಿತರೇ ನಿಮ್ಮ ಶುಭಹಾರೈಕೆಯೂ ಆಕೆಯ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಅಕ್ಷಯ್​ ಕುಮಾರ್​ ಹಾಗೂ ಸುನಿಲ್​ ಶೆಟ್ಟಿ ನಟನೆಯ ಬ್ಲಾಕ್​ ಬಸ್ಟರ್​ ಚಿತ್ರ ಧಡ್ಕನ್​​, ಬಗ್ಬನ್​, ಲಜ್ಜಾ ಸೇರಿದಂತೆ ಅನೇಕ ಚಿತ್ರದಲ್ಲಿ ಮಹಿಮಾ ನಟಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
