ಜೆರುಸಲೆಂ:ಬ್ಯೂಟಿ ಕ್ವೀನ್​ ಹಾಗೂ ಬಾಲಿವುಡ್​ ನಟಿ ಊರ್ವಶಿ ರೌತೇಲಾ ಇದೀಗ ಇಸ್ರೇಲಿನಲ್ಲಿದ್ದಾರೆ. ಅಲ್ಲಿ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತಾನ್ಯಾಹು ಅವರನ್ನು ಭೇಟಿಯಾದ ಊರ್ವಶಿ, ಭಗವದ್ಗೀತೆಯ ಇಂಗ್ಲಿಷ್​ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ, ನೆತಾನ್ಯಾಹುಗೆ ಹಿಂದಿ ಶಬ್ದಗಳನ್ನು ಕಲಿಸುವ ಪ್ರಯತ್ನ ಮಾಡಿದ್ದಾರೆ.

2015ರ ಮಿಸ್​ ದಿವಾ ಯೂನಿವರ್ಸ್​​ ಗೌರವವನ್ನು ಗಳಿಸಿದ್ದ ಊರ್ವಶಿ 2021ರ ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲಿ ಊರ್ವಶಿ ಮತ್ತು ಅವರ ಕುಟುಂಬವನ್ನು ಇಸ್ರೇಲ್​ ಪ್ರಧಾನಿ ಆಮಂತ್ರಿಸಿ ಗೌರವಿಸಿದರು ಎನ್ನಲಾಗಿದೆ. ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿರುವ ನಟಿ, ‘ನಮ್ಮನ್ನು ಆಮಂತ್ರಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.


A post shared by URVASHI RAUTELA 🇮🇳 (@urvashirautela)
ಜೊತೆಗೇ, ಪ್ರಧಾನಿ ನೆತಾನ್ಯಾಹು ಅವರೊಂದಿಗೆ ತಮ್ಮ ವಾರ್ತಾಲಾಪದ ವಿಡಿಯೋವೊಂದನ್ನು ಊರ್ವಶಿ ಶೇರ್​ ಮಾಡಿಕೊಂಡಿದ್ದಾರೆ. ಇಸ್ರೇಲ್​ ಪ್ರಧಾನಿ ತಮ್ಮ ಭಾಷೆಯಲ್ಲಿ ಎಲ್ಲಾ ಚೆನ್ನಾಗಿದೆ ಅನ್ನುವುದಕ್ಕೆ ‘ಹಬಾಬಾ’ ಎನ್ನುತ್ತೇವೆ. ಹಿಂದಿಯಲ್ಲಿ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಊರ್ವಶಿ ಅದಕ್ಕೆ ಹಾವಭಾವದೊಂದಿಗೆ ಕೆಲವು ಹಿಂದಿಯಲ್ಲಿ ‘ಸಬ್​ ಶಾಂದಾರ್​ ಸಬ್​ ಬಡಿಯಾ’ ಎಂದು ಹೇಳಿಕೊಟ್ಟಿದ್ದಾರೆ. ನೆತಾನ್ಯಾಹು ಅವರು ಸರಾಗವಾಗಿ ಅನುಕರಿಸಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.(ಏಜೆನ್ಸೀಸ್)
ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

ವಿಕಿ-ಕತ್ರಿನಾ ಮದುವೆಯ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
