ಅಹಮದಾಬಾದ್​:ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಮೊಟೆರೋ ಸ್ಟೇಡಿಯಂನಲ್ಲಿ ಡೊನಾಲ್ಡ್​ ಟ್ರಂಪ್​ ತಮ್ಮ ಭಾಷಣದಲ್ಲಿ ಮನರಂಜನಾ ಮಾಧ್ಯಮ ಸಿನಿಮಾದ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು.
ಭಾರತದ ದೇಶದ ಕ್ರಿಯಾಶೀಲತೆಯನ್ನು ಹೊಗಳಿದ ಟ್ರಂಪ್​, ಇಡೀ ವಿಶ್ವದಲ್ಲಿ ಭಾಂಗ್ರಾ, ಸಂಗೀತ, ನೃತ್ಯವನ್ನು ಆಸ್ವಾದಿಸುತ್ತಾರೆ. ಭಾರತದ ಸಿನಿಮಾಗಳಾದ ದಿಲ್​ವಾಲೇ ದುಲ್ಹನಿಯಾ ಲೇಜಾಯೇಂಗೆ ಮತ್ತು ಶೋಲೆ ಬಗ್ಗೆ ಪ್ರಸ್ತಾಪ ಮಾಡಿದರು.
ಭಾರತವು ಒಂದು ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುತ್ತದೆ. ಇದು ಬಾಲಿವುಡ್​ನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಇದರಿಂದ ಇಡೀ ವಿಶ್ವದ ಜನ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ ಎಂದರು.
ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಹಾಗೂ ಇಂಡಿಯನ್​ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಹೆಸರನ್ನು ಉಲ್ಲೇಖಿಸಿದ ಟ್ರಂಪ್​, ಈ ದೇಶದ ಜನ ಸಚಿನ್​ ತೆಂಡೂಲ್ಕರ್​, ವಿರಾಟ್ ಕೊಹ್ಲಿ ಅವರ ಜತೆಗೆ ಶ್ರೇಷ್ಠ ಕ್ರಿಕೆಟ್​ ಆಟಗಾರರನ್ನೂ ಹುರಿದುಂಬಿಸುತ್ತಾರೆ. ಇದೊಂದು ಒಳ್ಳೆಯ ವಿಚಾರ ಎಂದು ಟ್ರಂಪ್​ ಅಭಿಪ್ರಾಯ ಪಟ್ಟರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
