ಮುಂಬೈ:ಕಿಕ್ಕೇರಿದ ಸುದ್ದಿಯ ಹಿನ್ನೆಲೆಯಲ್ಲಿ ಇದೀಗ ಬಾಲಿವುಡ್​ ಸಿಡಿದೆದ್ದಿದೆ. ಮಾತ್ರವಲ್ಲ, ಎರಡು ಸುದ್ದಿವಾಹಿನಿ ಹಾಗೂ ಅದರ ನಾಲ್ವರು ನಿರೂಪಕರ ವಿರುದ್ಧ ಖಾನ್​ದಾನ್​ ಕೋರ್ಟ್​ ಮೆಟ್ಟಿಲೇರಿದೆ.
ಬಾಲಿವುಡ್​ನಲ್ಲಿನ ಡ್ರಗ್ಸ್​ ಮಾಫಿಯಾ ಕುರಿತಂತೆ ಬಿತ್ತರವಾಗಿರುವ ಸುದ್ದಿಯ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ಆಗಿದ್ದು, ಆಮೀರ್​ ಖಾನ್​, ಸಲ್ಮಾನ್​ ಖಾನ್​, ಕಬೀರ್ ಖಾನ್​, ಅಜಯ್​ ದೇವಗನ್​, ಅನಿಲ್​ ಕಪೂರ್​, ಫರ್ಹಾ ಅಖ್ತರ್​ ಸೇರಿ 34 ನಿರ್ಮಾಪಕರು/ನಿರ್ಮಾಣ ಸಂಸ್ಥೆಗಳು ಹಾಗೂ ಚಿತ್ರರಂಗಕ್ಕೆ ಸಂಬಂಧಿತ ನಾಲ್ಕು ಸಂಘಟನೆಗಳು ದೆಹಲಿ ಹೈಕೋರ್ಟ್​​ಗೆ ದೂರು ಸಲ್ಲಿಸಿವೆ.
ಡ್ರಗ್ಸ್​ ಪ್ರಕರಣ ಹಿನ್ನೆಲೆಯಲ್ಲಿ ಇಡೀ ಬಾಲಿವುಡ್ಡನ್ನೇ ಅವಹೇಳನಕಾರಿ ಆಗಿ ತೋರಿಸಲಾಗುತ್ತಿದೆ. ಹೀಗಾಗಿ ಸಂಬಂಧಿತ ಚಾನೆಲ್​ಗಳು/ನಿರೂಪಕರು ಬಾಲಿವುಡ್​ ಗಣ್ಯರ ಬಗ್ಗೆ ಸುದ್ದಿ ಪ್ರಕಟಿಸದಂತೆ ಹಾಗೂ ಅವಹೇಳನಕಾರಿಯಾಗಿ ಇದುವರೆಗೆ ಪ್ರಸಾರ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನು ಹಿಂಪಡೆಯುವಂತೆ ದೂರಿನಲ್ಲಿ ಕೋರಲಾಗಿದೆ.
ದ ಫಿಲ್ಮ್​​ ಆ್ಯಂಡ್​ ಟೆಲಿವಿಷನ್​ ಪ್ರೊಡ್ಯೂಸರ್ಸ್​ ಗಿಲ್ಡ್​ ಆಫ್​ ಇಂಡಿಯಾ(ಪಿಜಿಐ), ದ ಸಿನಿ ಆ್ಯಂಡ್​ ಟಿವಿ ಆರ್ಟಿಸ್ಟ್​ ಅಸೋಸಿಯೇಷನ್​, ಇಂಡಿಯನ್​ ಫಿಲ್ಮ್​ ಆ್ಯಂಡ್ ಟಿವಿ ಪ್ರೊಡ್ಯೂಸರ್ಸ್ ಕೌನ್ಸಿಲ್​, ಸ್ಕ್ರೀನ್​ ರೈಟರ್ಸ್​ ಅಸೋಸಿಯೇಷನ್​ ಕೂಡ ದೂರುದಾರರಾಗಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
