ಮುಂಬೈ :ಬಾಲಿವುಡ್ ಸ್ಟಾರ್ ಆಮೀರ್ ಖಾನ್​ಗೆ ಕರೊನಾ ಪಾಸಿಟೀವ್ ಬಂದಿದ್ದು, ಅವರು ತಮ್ಮ ಮನೆಯಲ್ಲೇ ಸೆಲ್ಫ್​ ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಐವತ್ತಾರು ವರ್ಷದ ಹಿರಿಯ ನಟ ಖಾನ್ ಎಲ್ಲಾ ಪ್ರೊಟೊಕಾಲ್​ಗಳನ್ನೂ ಪಾಲಿಸುತ್ತಿದ್ದು, ಆರಾಮವಾಗಿದ್ದಾರೆ ಎಂದು ಅವರ ಮಾಧ್ಯಮ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖಾನ್​ಗೆ ಕರೊನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ ಕೆಲವು ದಿನಗಳಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದ ಜನರು ಮುನ್ನೆಚ್ಚರಿಕೆಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಹೇಳಿದ್ದಾರೆ. ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳದ ಆಮೀರ್ ಖಾನ್, ಈ ತಿಂಗಳ ಮೊದಲಲ್ಲಿ, ಮುಂಬೈನಲ್ಲಿ ಕೊಯಿ ಜಾನೆ ನಾ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಮತ್ತೆ ತಮ್ಮ ಮಗ ಜುನೈದ್ ಮತ್ತು ಮಗಳು ಇರಾ ಖಾನ್​ರೊಂದಿಗೆ ಬಾಂದ್ರಾದ ಕೆಫೆಯೊಂದರಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…
ತಮ್ಮ ಜಗತ್ತಿನಲ್ಲೇ ಬದುಕುವ ರೂಢಿ ಇರುವ ಆಮೀರ್ ಖಾನ್, ಇತ್ತೀಚೆಗಷ್ಟೇ ತಮ್ಮ ಟ್ವಿಟರ್ ಮತ್ತು ಇನ್ಸ್​ಟಾಗ್ರಾಂ ವೈಯಕ್ತಿಕ ಖಾತೆಗಳನ್ನು ಡೆಲಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಆ್ಯಕ್ಟೀವ್ ಆಗಿರದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾರ್ಚ್ 14 ರಂದು ತಮ್ಮ ಹುಟ್ಟಿದಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಖಾನ್ ತಿಳಿಸಿದ್ದರು.(ಏಜೆನ್ಸೀಸ್)
VIDEO | “ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್” : ಪ್ರಧಾನಿ ಮೋದಿ
ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
VIDEO | ವಿಕಿ ಕೌಶಲ್​ರ ಈ ಕೌಶಲ್ಯ ತಪ್ಪದೇ ನೋಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − three =
Remember me
