ಮುಂಬೈ:ಬಾಲಿವುಡ್ ಹಿರಿಯ ನಟರಾಗಿದ್ದ ಹಾಗೂ ಬಿಆರ್​ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ನಟಿಸಿದ್ದ ಸತೀಶ್ ಕೌಲ್ (66) ಅವರು ಇಂದು ಪಂಜಾಬ್​ನ ಲೂದಿಯಾನದಲ್ಲಿ ನಿಧನರಾಗಿದ್ದಾರೆ.
ಅವರು ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದರು ಎಂದು ಲೂದಿಯಾನದ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
1954 ರಲ್ಲಿ ಕಾಶ್ಮಿರದಲ್ಲಿ ಜನಿಸಿದ್ದ ಸತೀಶ್ ಕೌಲ್ ಅವರು ಸುಮಾರು 300 ಹಿಂದಿ ಚಿತ್ರಗಳಲ್ಲಿ ಹಾಗೂ ಅನೇಕ ಪಂಜಾಬಿ ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದರು. ಕರ್ಮ, ಪ್ರೇಮ ಭಾರತ್, ವಾರಂಟ್, ಗುನಾಹೋ ಕಾ ಪೈಸ್ಲಾ, ಭಕ್ತಿ ಮೇ ಶಕ್ತಿ ಹಾಗೂ ಡ್ಯಾನ್ಸ್ ಡ್ಯಾನ್ಸ್​ ಅವರು ನಟಿಸಿದ್ದ ಪ್ರಮುಖ ಸಿನಿಮಾಗಳು. ಅಲ್ಲದೇ ಅವರು ಮುಂಬೈನಲ್ಲಿ ನಟನಾ ಶಾಲೆಯೊಂದನ್ನೂ ಸಹ ತೆರದಿದ್ದರು.
ಕಳೆದ ವರ್ಷ ಲಾಕ್​ಡೌನ್​ನಿಂದ ಜೀವನ ನಿರ್ವಹಣೆಗೆ ತೊಂದರೆ ಆಗಿದೆ ಎಂದು ಈ ನಟ ಹೇಳಿ ಕೊಂಡಿದ್ದರು. ಹೀಗಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 5 ಲಕ್ಷ ರೂಪಾಯಿ ಸಹಾಯಧನ ನೀಡಿದ್ದರು.
ನಟಿ ಶ್ವೇತಾ ಚಂಗಪ್ಪಗೆ ಕರೊನಾ ಪಾಸಿಟಿವ್​

ಹಿಂದಿಗೆ ಆಕ್ಟ್ 1978: ಬೇರೆ ಭಾಷೆಗಳಲ್ಲೂ ಬೇಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
