ಮುಂಬೈ:ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್​ ಸಿಕ್ಕಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಹಾಯಕ ಹಾಗೂ ಮುಂಬೈ ಕ್ರೈಂ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಯಾಗಿದ್ದ ರಿಯಾಜ್ ಖಾಜಿಯನ್ನು ಭಾನುವಾರ ಎನ್​ಐಎ ಬಂಧಿಸಿದೆ. ಮುಕೇಶ್ ಅಂಬಾನಿ ಮನೆ ಸ್ಪೋಟಕ ಇರಿಸಿದ್ದ ಕಾರ್​​ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದ ಆರೋಪ ಹಾಗೂ ಸಾಕ್ಷ್ಯ ನಾಶದ ಆರೋಪವನ್ನು ಖಾಜಿ ಮೇಲೆ ಹೊರಿಸಲಾಗಿದೆ. ಸಚಿನ್ ವಾಜೆ ಅವರೇ ತನಗೆ ಎರಡು ಕಾರ್​​ಗಳ ನಂಬರ್​ ಪ್ಲೇಟ್ ಬದಲಾವಣೆ ಮಾಡಲು ಹೇಳಿದ್ದರು ಎಂಬುದಾಗಿ ರಿಯಾಜ್ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ:ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…
ಫೆಬ್ರವರಿ 25 ರಂದು ಸ್ಕಾರ್ಪಿಯೋ ವಾಹನ ಒಂದು ಸ್ಪೋಟಕ ಹಾಗೂ ಬೆದರಿಕೆ ಪತ್ರ ಒಳಗೊಂಡು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಾದ ಅಂಟಿಲಿಯಾ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಸ್ಕಾರ್ಪಿಯೋ ವಾಹನ ತನ್ನದು ಎಂದು ಹೇಳಿಕೊಂಡು ಮನ್ಸೂಕ್ ಹಿರೇನ್ ಎನ್ನುವ ವ್ಯಕ್ತಿ ಪೊಲೀಸ್​ ಮುಂದೆ ಹೊರಟಿದ್ದರು. ಆದರೆ ಮಾರ್ಚ್ 5 ರಂದು ಮನ್ಸೂಕ್ ಹಿರೇನ್ ಏಕಾಏಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಎನ್​ಕೌಂಟ್​ರ್ ಪರಿಣಿತಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್​ಐಟ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್).
ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಿದ್ದೇವೆ ಎಂದ ಮುಂಬೈ ಪೊಲೀಸ್: ಸಂಚು ಮಾಡಿದ್ದು ಸಚಿನ್​ ವಾಜೆ?

ವಾಜೆ ಅಕ್ರಮ ಬಯಲು: ಐಷಾರಾಮಿ ಹೋಟೆಲ್​ನಲ್ಲಿ ವಸೂಲಿ ದಂಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
