ನವದೆಹಲಿ:ಮುಂಬೈನಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಕಚೇರಿ ತೆರವುಗೊಳಿಸುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್​ ತಡೆ ನೀಡಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಕಚೇರಿ ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಕಂಗಾನಾ ಪರ ವಕೀಲ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ತೆರವು ಕಾರ್ಯಾಚರಣೆಗೆ ತಡೆ ನೀಡಿದ್ದು, ಕಂಗನಾ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರವನ್ನು ಕೇಳಿದೆ. ಈ ಮೂಲಕ ಕಂಗನಾ ಮಹಾ ಸರ್ಕಾರದ ವಿರುದ್ಧ ಬಹುದೊಡ್ಡ ಗೆಲುವು ಸಾಧಿಸಿದಂತಿದೆ.
Bombay High Court stays BMC's demolition at Kangana Ranaut's property, asks the civic body to file reply on actor's petitionpic.twitter.com/VaoeBSOnay
— ANI (@ANI)September 9, 2020

ಇಂದು ಬೆಳಗ್ಗೆಯಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯಿಂದ ಹೊರಟ ಕಂಗನಾ ಮುಂಬೈಗೆ ಮರಳಿದ್ದಾರೆ. ಅವರು ಮುಂಬೈಗೆ ಆಗಮಿಸುವ ಮುಂಚೆಯೇ ಮಹಾ ಸರ್ಕಾರ ಕಚೇರಿಯ ತೆರವು ಕಾರ್ಯಾಚರಣೆ ನಡೆಸುತ್ತಿತ್ತು.
ಇದನ್ನೂ ಓದಿ:ಕಂಗನಾ ಕಚೇರಿ ನೆಲಸಮ: ಕಾರ್ಯಾಚರಣೆಗಿಳಿದ ಜೆಸಿಬಿ..!
ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ತೊಡೆತಟ್ಟಿದ್ದಾರೆ. ಇಂದು ಬೆಳಗ್ಗೆಯಷ್ಟೇ ಟ್ವೀಟ್​ ಮಾಡಿದ್ದ ಕಂಗನಾ, ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಗೂಂಡಾಗಳು ಮುಂಬೈನಲ್ಲಿರುವ ನನ್ನ ಕಚೇರಿಯನ್ನು ಅಕ್ರಮವಾಗಿ ನೆಲಸಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್​ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್​ ಸಹ ಹೊರಡಿಸಿದ್ದರು.
ಸೋಮವಾರ ನೀಡಿದ್ದ ನೋಟೀಸ್​ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಉತ್ತರ ಕೊಡದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ:ಕಂಗನಾ ಕಚೇರಿ ನೆಲಸಮ ವಿರುದ್ಧ ನೆಟ್ಟಿಗರ ಆಕ್ರೋಶ: ಟ್ವಿಟರ್​ನಲ್ಲಿ ಟ್ರೆಂಡ್​ ಆದ ಹ್ಯಾಶ್​ಟ್ಯಾಗ್​ಗಳಿವು…​
ಬೃಹತ್​ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್​ ಅಕೌಂಟ್​ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್​ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು.
‘ಇದು ನನ್ನ ‘ಮಣಿಕರ್ಣಿಕಾ’ ಆಫೀಸ್​. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್​ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದರು.(ಏಜೆನ್ಸೀಸ್​)
ಕಂಗನಾ ವಿರುದ್ಧ ಮಾತನಾಡಿದ ಮಹಾರಾಷ್ಟ್ರ ಗೃಹಸಚಿವರಿಗೆ ಸಾಲು ಸಾಲು ಬೆದರಿಕೆ ಕರೆ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + nineteen =
Remember me
