ನವದೆಹಲಿ:ಓಲಾ, ಊಬರ್​ನಂಥ ಕಂಪೆನಿಗಳಿಂದಾಗಿ ದೇಶದ ಅನೇಕ ನಗರಗಳಲ್ಲಿ ಈಗ ಆಟೋ ಅಥವಾ ಕ್ಯಾಬ್​ಅನ್ನು ಮನೆ ಬಾಗಿಲಿಗೇ ಕರೆಸಿಕೊಳ್ಳುವ ಸೌಲಭ್ಯ ಸಿಕ್ಕಿದೆ. ಸ್ಮಾರ್ಟ್​ಫೋನಿನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಬುಕ್​ ಮಾಡುವುದೊಂದೇ ಬಾಕಿ! ಆದರೆ, ಇನ್ನು ಮುಂದಕ್ಕೆ ಈ ರೀತಿಯ ಸೇವೆ ಬಳಸಲು ಪ್ರತ್ಯೇಕ ಆ್ಯಪ್​ಗಳ ಅಗತ್ಯವೂ ಬೀಳದಿರಬಹುದು.
ಹೌದು, ಊಬರ್​ ಕಂಪೆನಿ ತನ್ನ ಬಳಕೆದಾರರಿಗೆ ಜನಪ್ರಿಯ ನೆಟ್​​ವರ್ಕಿಂಗ್​ ಆ್ಯಪ್​ ಆದ ವಾಟ್ಸಾಪ್​ ಮೂಲಕವೇ ರೈಡ್​ ಬುಕ್​ ಮಾಡುವುದಕ್ಕೂ ಅವಕಾಶ ಕಲ್ಪಿಸುವ ಯೋಜನೆ ಮಾಡಿದೆ. ಜಗತ್ತಿನಲ್ಲೇ ಮೊದಲಿಗೆ ಭಾರತದ ಲಖನೌ ನಗರದಲ್ಲಿ ಈ ಪ್ರಯೋಗಕ್ಕೆ ಚಾಲನೆ ನೀಡುತ್ತಿದ್ದು, ಯಶಸ್ಸು ಕಂಡರೆ ಅನ್ಯ ನಗರಗಳಿಗೂ ವಿಸ್ತರಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಉಪನ್ಯಾಸಕ!
ವಾಟ್ಸಾಪ್​ ಬುಸಿನೆಸ್​ ಪ್ಲಾಟ್​ಫಾರಂ ಮೇಲೆ ನಿರ್ಮಿಸಲಾಗುವ ಈ ಸೇವೆಯು ಊಬರ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡಲಿದೆ. “ಎಲ್ಲಾ ಭಾರತೀಯರಿಗೂ ಊಬರ್​ ಟ್ರಿಪ್​ ತೆಗೆದುಕೊಳ್ಳಲು ಸುಲಭವಾಗಿಸುವುದು ನಮ್ಮ ಉದ್ದೇಶ. ಅವರಿಗೆ ಕಂಫರ್ಟಬಲ್​ ಆದ ಪ್ಲಾಟ್​ಫಾರಂನಲ್ಲಿ ಸೇವೆ ಒದಗಿಸಲು ವಾಟ್ಸಾಪ್​ನೊಂದಿಗೆ ಈ ಪಾಲುದಾರಿಕೆ ಮಾಡಿಕೊಂಡಿದ್ದೇವೆ” ಎಂದು ಊಬರ್​ನ ಹಿರಿಯ ನಿರ್ದೇಶಕ ನಂದಿನಿ ಮಹೇಶ್ವರಿ ಹೇಳಿದ್ದಾರೆ.(ಏಜೆನ್ಸೀಸ್)
ವಿಕಿ ಕೌಶಲ್​ ಜತೆ ಕತ್ರೀನಾ ಮದುವೆ; ಅತಿಥಿ ಆಗಲಿದ್ದಾರಾ, ಸಲ್ಮಾನ್​ ಖಾನ್​?

ಕಂಗನಾ ಪೋಸ್ಟ್​ಗಳನ್ನು ಸೆನ್ಸಾರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
