ನವದೆಹಲಿ:ಭಾರತೀಯ ರೈಲ್ವೆ ಜೂನ್​ 1ರಿಂದ ಆರಂಭಿಸಲು ಉದ್ದೇಶಿಸಿರುವ 200 ಪ್ಯಾಸೆಂಜರ್​ ರೈಲುಗಳ ಟಿಕೆಟ್​ ಬುಕ್ಕಿಂಗ್​ ಗುರುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದೆ. ಐಆರ್​ಸಿಟಿಸಿ ವೆಬ್​ಸೈಟ್​ ಅಥವಾ ಆ್ಯಪ್​ ಮೂಲಕ ಎಸಿ ಮತ್ತು ನಾನ್​ ಎಸಿ ಬೋಗಿಗಳಲ್ಲಿ ಸಂಚರಿಸಲು ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
ಜೂನ್​ 1ರಿಂದ ಸಂಚಾರ ಆರಂಭಿಸಲಿರುವ 200 ಪ್ಯಾಸೆಂಜರ್​ ರೈಲುಗಳ ಪೈಕಿ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​, ನೇತ್ರಾವತಿ ಎಕ್ಸ್​ಪ್ರೆಸ್​ ಮತ್ತು ಹೌರಾದಿಂದ ಯಶಂತಪುರಕ್ಕೆ ಬರುವ ಡುರಾಂಟೋ ಎಕ್ಸ್​ಪ್ರೆಸ್​ ರೈಲುಗಳು ಕರ್ನಾಟಕಕ್ಕೆ ಸಂಪರ್ಕ ಒದಗಿಸಲಿವೆ.ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಭಾರತೀಯ ರೈಲ್ವೆ, ನಿಗದಿತ ರೈಲು ಹೊರಡುವ 2 ಗಂಟೆ ಮುಂಚಿನವರೆಗೂ ಟಿಕೆಟ್​ಗಳನ್ನು ಕಾಯ್ದಿರಿಸಬಹುದಾಗಿದೆ. ಜತೆಗೆ 30 ದಿನಗಳ ಅವಧಿಯವರೆಗೂ ಟಿಕೆಟ್​ಗಳನ್ನು ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ:ಸಾವಿನಲ್ಲೂ ಒಂದಾದ ವೃದ್ಧ ದಂಪತಿ: ಪತ್ನಿಯ ನಿಧನದ ಸುದ್ದಿ ಕೇಳಿ ಪತಿಗೂ ಹೃದಯಾಘಾತ
ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಿರುವವರು ತಮ್ಮ ರೈಲುಗಳು ಹೊರಡುವ 90 ನಿಮಿಷಗಳ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ. ಕೋವಿಡ್​ 19 ಸೋಂಕು ಹಿನ್ನೆಲೆಯಲ್ಲಿ ದೇಹದ ಉಷ್ಣಾಂಶ ಪರೀಕ್ಷಿಸುವುದು ಹಾಗೂ ಲಗೇಜ್​ಗಳನ್ನು ಸ್ಯಾನಿಟೈಸ್​ ಮಾಡುವುದು ಸೇರಿ ಇನ್ನಿತರ ಕಾರ್ಯಗಳನ್ನು ಮಾಡಬೇಕಿರುವುದು ಇದಕ್ಕೆ ಕಾರಣ. ಪರೀಕ್ಷೆಯ ವೇಳೆ ಕೋವಿಡ್​ 19 ಲಕ್ಷಣಗಳನ್ನು ಕಂಡು ಬಂದಲ್ಲಿ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ. ಜತೆಗೆ ಅವರಿಗೆ ಶೇ.100 ಟಿಕೆಟ್​ ಹಣವನ್ನು ಹಿಂದಿರುಗಿಸಲಾಗುತ್ತದೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸುವುದು ಹಾಗೂ ತಮ್ಮ ಮೊಬೈಲ್​ನಲ್ಲಿ ಆರೋಗ್ಯಸೇತು ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.
ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಆರ್​ಎಸಿ ಮತ್ತು ವೇಟೆಡ್​ ಲಿಸ್ಟ್​ ಟಿಕೆಟ್​ಗಳಿಗೂ ಅವಕಾಶ ನೀಡಲಾಗುತ್ತದೆ. ಆರ್​ಎಸಿ ಟಿಕೆಟ್​ ಹೊಂದಿರುವವರಿಗೆ ಒಂದೇ ಸೀಟ್​ನಲ್ಲಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಚಾರ್ಟ್​ ಸಿದ್ಧವಾದ ನಂತರದಲ್ಲಿ ಟಿಕೆಟ್​ ಕನ್ಫರ್ಮ್​ ಆಗದೇ ಇದ್ದರೆ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.ಎಲ್ಲ ರೈಲು ನಿಲ್ದಾಣಗಳಲ್ಲೂ ಹೋಟೆಲ್​ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಅಲ್ಲೇ ತಿನ್ನಲು ಅವಕಾಶ ನೀಡಲಾಗುವುದಿಲ್ಲ. ಬದಲಿಗೆ ಪಾರ್ಸೆಲ್​ ತಂದು ರೈಲಿನಲ್ಲಿ ತಿನ್ನಲು ಅಡ್ಡಿಯಿಲ್ಲ ಎಂದು ಹೇಳಿದೆ.
ಅಂಫಾನ್ ಚಂಡಮಾರುತಕ್ಕೆ 12 ಬಲಿ: ಕರೊನಾಗಿಂತ ಭೀಕರ ಎಂದ ಸಿಎಂ ಮಮತಾ ಬ್ಯಾನರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
