ನವದೆಹಲಿ:ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ಕಟ್ಟಿಹಾಕಲು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ‘ಮುನ್ನೆಚ್ಚರಿಕೆ ಡೋಸ್’ಗೆ ಕೊರ್ಬಿವ್ಯಾಕ್ಸ್ ಲಸಿಕೆ ಬಳಕೆಯಾಗುವ ಸಾಧ್ಯತೆ ಹೆಚ್ಚಿದೆ. ದೇಶದ ಉನ್ನತ ತಾಂತ್ರಿಕ ಸಲಹಾ ಮಂಡಳಿಯಲ್ಲಿ ಈ ಬಗ್ಗೆ ಒಮ್ಮತ ವ್ಯಕ್ತವಾಗಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿವೆ. ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಬದಲು ಕೊರ್ಬಿವ್ಯಾಕ್ಸ್ ಲಸಿಕೆ ಬಳಸಲು ತಜ್ಞರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ‘ಮುನ್ನೆಚ್ಚರಿಕೆ’ ಎಂಬ ಪರಿಭಾಷೆಯೇ ಮುಂದಿನ ಡೋಸ್ ಕೇವಲ ಮೂರನೇ ಡೋಸ್ ಆಗಿರದೆ ಹೊಸ ವ್ಯಾಕ್ಸಿನ್ ಆಗಲಿದೆ ಎನ್ನುವುದರ ಸೂಚನೆಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೈದರಾಬಾದ್ ಮೂಲದ ಬಯಾಲಾಜಿಕಲ್-ಇ ಕಂಪನಿಯ ಕೊರ್ಬಿವ್ಯಾಕ್ಸ್ ಸಹಿತ ಹಲವು ಲಸಿಕೆಗಳು ಬೂಸ್ಟರ್ ಡೋಸ್ ಆಗುವ ಸಾಧ್ಯತೆಯಿದೆ. ಕೊರ್ಬಿವ್ಯಾಕ್ಸ್, ಪ್ರೊಟೀನ್ ಸಬ್-ಯುನಿಟ್ ಕೋವಿಡ್-19 ಲಸಿಕೆಯಾಗಿದೆ. ನಿಷ್ಕ್ರಿಯ ಪೂರ್ಣ-ಕೋಶದ ವ್ಯಾಕ್ಸಿನ್​ಗಿಂತ ಇದು ಭಿನ್ನವಾಗಿದ್ದು ವೈರಸ್​ನ ಆಂಟಿಜೆನಿಕ್ ಭಾಗಗಳು ಮಾತ್ರ ಅದರಲ್ಲಿವೆ. ಇದರಿಂದ ರೋಗನಿರೋಧಕ ಶಕ್ತಿಯ ಪ್ರಮಾಣ ಹೆಚ್ಚುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಒಂದು ವರ್ಷ ಅಂತರ?:ಪ್ರಧಾನಿ ಶನಿವಾರ ಘೋಷಿಸಿರುವ ‘ಮುನ್ನೆಚ್ಚರಿಕೆ ಡೋಸ್’, ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳು ಅಥವಾ 12 ತಿಂಗಳ ನಂತರ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಲಸಿಕೆ ಅಭಿಯಾನದಲ್ಲಿ ಸದ್ಯ ಬಳಸಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ನೀಡಿಕೆಯ ಅವಧಿಯ ಅಂತರ ಎಷ್ಟಿರಬೇಕೆಂಬುದನ್ನು ಸೂಕ್ಷ್ಮವಾಗಿ ಲೆಕ್ಕಾಚಾರ ಹಾಕಲಾಗುತ್ತಿದೆ. ಶೀಘ್ರವೇ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.
ಮೆಡಿಕಲ್ ಸರ್ಟಿಫಿಕೆಟ್ ಕಡ್ಡಾಯ:ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆಯಬೇಕಾದರೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ವೃದ್ಧರಲ್ಲಿರುವ ಅನ್ಯ-ವ್ಯಾಧಿಗಳನ್ನು ಸಾಬೀತುಪಡಿಸಲು ಸರ್ಟಿಫಿಕೆಟ್ ಅಗತ್ಯ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್​ಎಚ್​ಎ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್.ಎಸ್. ಶರ್ಮಾ ತಿಳಿಸಿದ್ದಾರೆ. 20 ಅನ್ಯವ್ಯಾಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. 45-59 ವಯಸ್ಸಿನವರಿಗೆ ಲಸಿಕೆ ಅಭಿಯಾನದ ಆರಂಭದಲ್ಲಿ ಅನ್ಯವ್ಯಾಧಿಗಳ ಒಂದು ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈಗಲೂ ಪ್ರಕ್ರಿಯೆ ಅದೇ ಆಗಿರಲಿದ್ದು ಈ ಬಾರಿ ವಯೋಗುಂಪು ಮಾತ್ರ ಭಿನ್ನವಾಗಿರುತ್ತದೆ ಎಂದು ಶರ್ಮಾ ಹೇಳಿದ್ದಾರೆ.
58 ಕೋಟಿ ಡೋಸ್ ಖರೀದಿ:ಮಕ್ಕಳಿಗೆ ಲಸಿಕೆ ನೀಡಲು ಹಾಗೂ ಕೆಲವು ನಿರ್ದಿಷ್ಟ ವಯಸ್ಕ ವಿಭಾಗಗಳಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕಲು ಸಜ್ಜಾಗಿರುವ ಭಾರತ, ಈ ಗುರಿ ಸಾಧಿಸಲು 50 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿಸುವ ಸಾಧ್ಯತೆಯಿದೆ. ಲಸಿಕೆ ಜಾಲ ಕೊವ್ಯಾಕ್ಸ್ ನಿಂದ ಭಾರತ 20 ಕೋಟಿ ಡೋಸ್ ಲಸಿಕೆ ಪಡೆಯುವ ಸಾಧ್ಯತೆಯಿದೆ.
ಫ್ರಾನ್ಸ್​ನಲ್ಲಿ ಲಕ್ಷ ಕೇಸ್:ಫ್ರಾನ್​ನಲ್ಲಿ ಕರೊನಾ ಸೋಂಕಿನ 1,04,611 ದೈನಿಕ ಪ್ರಕರಣಗಳು ಪತ್ತೆಯಾ ಗಿದ್ದು ವ್ಯಾಧಿ ಸ್ಪೋಟಗೊಂಡಾಗಿನಿಂದ ದಾಖಲಾದ ಅತಿ ಹೆಚ್ಚಿನ ದೈನಿಕ ಕೇಸ್ ಆಗಿದೆ. ಇದರೊಂದಿಗೆ ದೇಶದಲ್ಲಿ ವ್ಯಾಧಿಪೀಡಿತರ ಸಂಖ್ಯೆ 90,88,371ಕ್ಕೆ ಏರಿದೆ. ಸದ್ಯಕ್ಕೆ 16,162 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು ಆ ಪೈಕಿ 3,282 ಜನರು ಐಸಿಯುನಲ್ಲಿದ್ದಾರೆ ಎಂದು ಫ್ರೆಂಚ್ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ. 84 ಜನರು ಹೊಸದಾಗಿ ರೋಗಕ್ಕೆ ಬಲಿಯಾಗಿದ್ದು ಮೃತರ ಸಂಖ್ಯೆ 1,22,546ಕ್ಕೆ ತಲುಪಿದೆ. ಒಮಿಕ್ರಾನ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಫ್ರೆಂಚ್ ವೈಜ್ಞಾನಿಕ ಮಂಡಳಿಯು ಗುರುವಾರ ಸರ್ಕಾರಕ್ಕೆ ಸಲಹೆ ಮಾಡಿತ್ತು.
ಬೂಸ್ಟರ್ ಡೋಸ್ ನೀಡಿಕೆ ಕುರಿತ ನನ್ನ ಸಲಹೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ಹಾಗೂ ಬೂಸ್ಟರ್ ಡೋಸ್ ಅಗತ್ಯ. ಬೂಸ್ಟರ್ ಡೋಸ್​ನ ಸಲಹೆಯನ್ನು ಕೇಂದ್ರ ಒಪ್ಪಿರುವುದು ಸರಿಯಾದ ಹೆಜ್ಜೆಯಾಗಿದೆ.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ತಿಂಗಳ ಕಾಲ ಇರುತ್ತೆ ವೈರಸ್:ಇಡೀ ದೇಹವನ್ನು ಸಂಚರಿಸಿದ ನಂತರ ಕರೊನಾ ವೈರಸ್ ಹಲವು ತಿಂಗಳ ಕಾಲ ದೇಹದಲ್ಲಿ ಇರಬಲ್ಲದು ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. ವೈರಸ್ ಸೋಂಕಿದ ಕೆಲವೇ ದಿನಗಳಲ್ಲಿ ಅದು ಉಸಿರಾಟದ ಮಾರ್ಗದ ಮೂಲಕ ಹೃದಯ, ಮಿದುಳು ಮತ್ತು ದೇಹದ ಪ್ರತಿ ಅಂಗಕ್ಕೆ ಹರಡಬಹುದು ಎಂದು ಅವರು ತಿಳಿಸಿದ್ದಾರೆ.
422ಕ್ಕೇರಿದ ಒಮಿಕ್ರಾನ್ ಪ್ರಕರಣ:ವೇಗವಾಗಿ ಹರಡುವ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದದ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 422ಕ್ಕೆ ಏರಿದೆ. ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು, 108 ಒಮಿಕ್ರಾನ್ ಸೋಂಕಿತರಿದ್ದಾರೆ.
ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
