ಗುವಾಹಟಿ:ಭಾರತದ ಕ್ಷಿಪ್ರ ಪ್ರಗತಿಯು ಯುವಶಕ್ತಿಯಲ್ಲಿನ ವಿಶ್ವಾಸ ವೃದ್ಧಿಸುತ್ತದೆ ಮಾತ್ರವಲ್ಲ, ಆತ್ಮವಿಶ್ವಾಸಿ ಯುವಕರು ರಾಷ್ಟ್ರದ ಭವಿಷ್ಯ ಬದಲಾಯಿಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
‘ಇಂಡಿಯಾಸ್ ಟೆಕೇಡ್:ಚಿಪ್ಸ್ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಲ್ಲದೆ ಇದೇ ವೇಳೆ ದೇಶದ 1.25 ಲಕ್ಷ ಕೋಟಿ ರೂ. ಮೊತ್ತದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೂ ಅವರು ವಿಡಿಯೋ ಕಾನ್ಪೆರೆನ್ಸ್ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ 60 ಸಾವಿರಕ್ಕೂ ಅಧಿಕ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಾಕ್ಷಿಯಾಗಿವೆ. ಭಾರತದ ಭವಿಷ್ಯದಲ್ಲಿ ನಿಜವಾದ ಪಾಲುದಾರರಾಗಿರುವ ಯುವಪೀಳಿಗೆಯ ಕನಸಿನ ಕಾರ್ಯಕ್ರಮ ಇದಾಗಿದೆ. ಭಾರತ ಹೇಗೆ ಬಹುಮುಖಿ ಶೈಲಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಯುವಕರು ಗಮನಿಸುತ್ತಿದ್ದಾರೆ. ಭಾರತದ ಯುವಕರು ಸಮರ್ಥರು, ಅವರಿಗೆ ಅವಕಾಶಗಳ ಅಗತ್ಯವಿದೆ. ಸೆಮಿಕಂಡಕ್ಟರ್ ಉಪಕ್ರಮ ಭಾರತಕ್ಕೆ ಅಂಥ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಮೋದಿ ಹೇಳಿದರು.
ಎರಡು ವರ್ಷಗಳ ಹಿಂದೆ ಈ ಯೋಜನೆಗಳ ಕುರಿತು ಘೋಷಣೆ ಮಾಡಲಾಗಿದ್ದು, ಅದಾಗಿ ಕೆಲವೇ ತಿಂಗಳಲ್ಲಿ ಮೊದಲ ಒಪ್ಪಂದ ಕೈಗೊಳ್ಳಲಾಗಿದ್ದು, ಇದೀಗ ಶಿಲಾನ್ಯಾಸ ಕೂಡ ನಡೆಸಲಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಬೇಕಾಗುವ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಭಾರತ ಜಾಗತಿಕ ಶಕ್ತಿ ಆಗುವ ದಿನಗಳು ದೂರವಿಲ್ಲ. ಮೇಡ್ ಇನ್ ಇಂಡಿಯಾ ಹಾಗೂ ಡಿಸೈನ್ಡ್ ಇನ್ ಇಂಡಿಯಾ ಚಿಪ್​ಗಳು ಭಾರತವನ್ನು ಆತ್ಮನಿರ್ಭರ ಹಾಗೂ ಅತ್ಯಾಧುನಿಕ ಆಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸೆಮಿಕಂಡಕ್ಟರ್ ಸಂಶೋಧನೆಗಳು ಯುವಕರಿಗೆ ಹೆಚ್ಚು ಪ್ರಯೋಜನಕಾರಿ ಆಗಲಿವೆ. ಸೆಮಿಕಂಡಕ್ಟರ್ ಬರೀ ಒಂದು ಉದ್ಯಮವಲ್ಲ, ಅದು ಅಗಾಧ ಸಾಮರ್ಥ್ಯ ತೆರೆಯುವ ಬಾಗಿಲು. ಭಾರತ ಸೃಷ್ಟಿಸಿರುವ ಅವಕಾಶಗಳ ಕುರಿತು ಇಂದಿನ ಯುವಜನತೆ ಹೆಚ್ಚು ಅರಿವು ಹೊಂದಿದ್ದಾರೆ. ಭಾರತ ಈಗ ಹಳೇ ಚಿಂತನೆ ಹಾಗೂ ಹಳೆಯ ವಿಧಾನಗಳಿಂದ ತುಂಬಾ ಮುಂದೆ ಬಂದಿದ್ದು, ತ್ವರಿತಗತಿಯಲ್ಲಿ ನಿರ್ಣಯ ಕೈಗೊಳ್ಳುವ ಜತೆಗೆ ನೀತಿಗಳನ್ನೂ ರೂಪಿಸಲಾಗುತ್ತಿದೆ ಎಂದರು. ಜಗತ್ತಿನಲ್ಲಿನ ಕೃತಕ ಬುದ್ಧಿಮತ್ತೆ ಕುರಿತು ಕೂಡ ಮಾತನಾಡಿದ ಮೋದಿ, ತಮ್ಮ ಭಾಷಣ ಕೆಲವೇ ಕ್ಷಣಗಳಲ್ಲಿ ವಿವಿಧ ಭಾಷೆಗಳಿಗೆ ಅನುವಾದ ಆಗುತ್ತಿರುವುದರ ಉದಾಹರಣೆ ನೀಡಿದರು. ಅಲ್ಲದೆ ಯುವಜನತೆ ತಮ್ಮ ಸಂದೇಶಗಳನ್ನು ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ತಲುಪಿಸುತ್ತಿರುವುದರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ‘ಮೋದಿಯ ಗ್ಯಾರಂಟಿಗಳು ನಿಮಗಾಗಿ, ನಿಮ್ಮದೇ ಭವಿಷ್ಯಕ್ಕಾಗಿ’ ಎಂದು ಅವರು ಯುವಜನತೆಗೆ ತಿಳಿಸಿದರು.
ಸೈನಿ ವಿಶ್ವಾಸಮತ ಸಾಬೀತು:ಹರಿಯಾಣದಲ್ಲಿ ಮಂಗಳವಾರವಷ್ಟೇ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಯಾಬ್ ಸೈನಿ ಬುಧವಾರ ವಿಶ್ವಾಸಮತ ಸಾಬೀತು ಪಡಿಸಿದರು. ದುಷ್ಯಂತ್ ಸಿಂಗ್ ಚೌಟಾಲಾ ನೇತೃತ್ವದ ಜೆಜೆಪಿ ಜತೆ ಮೈತ್ರಿ ಮುರಿದುಬಿದ್ದರೂ ಬಿಜೆಪಿಗೆ ಬಹುಮತ ಇದೆ ಎಂಬುದನ್ನು ಅವರು ಸದನದಲ್ಲಿ ಖಚಿತಪಡಿಸಿದರು. ‘ನನ್ನ ಕುಟುಂಬದ ಯಾರೂ ರಾಜಕೀಯ ಹಿನ್ನೆಲೆಯವರಲ್ಲ, ಅದಾಗ್ಯೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಇಂಥ ದೊಡ್ಡ ಅವಕಾಶ ನೀಡಿದೆ. ಬಿಜೆಪಿಯಂಥ ಪಕ್ಷದಲ್ಲಿ ಮಾತ್ರ ಇದು ಸಾಧ್ಯ’ ಎಂದು ಸೈನಿ ಸದನದಲ್ಲಿ ಹೇಳಿದರು.
₹ 1.25 ಲಕ್ಷ ಕೋಟಿ ಯೋಜನೆ:ಅಸ್ಸಾಂ ಮತ್ತು ಗುಜರಾತ್​ನ ಒಟ್ಟು 1.25 ಲಕ್ಷ ಕೋಟಿ ರೂ. ಮೊತ್ತದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನಡೆಸಿದರು. ಗುಜರಾತ್​ನ ಧೊಲೇರಾ ಸ್ಪೆಷಲ್ ಇನ್​ವೆಸ್ಟ್​ಮೆಂಟ್ ರೀಜಿಯನ್​ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್, ಅಸ್ಸಾಮ್ ಮೊರಿಗಾಂವ್​ನಲ್ಲಿ ಔಟ್​ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟ್ (ಒಎಸ್​ಎಟಿ) ಮತ್ತು ಗುಜರಾತ್​ನ ಸನದ್​ನಲ್ಲಿನ ಒಎಸ್​ಎಟಿಗಳಿಗೆ ಶಿಲಾನ್ಯಾಸ ನಡೆಸಿದರು. ಈ ಮೂಲಕ ಭಾರತದ ಭವ್ಯ ಭವಿಷ್ಯಕ್ಕೆ ಬುನಾದಿ ಹಾಕಲಾಗುತ್ತಿದ್ದು, ಇವತ್ತಿನ ಯೋಜನೆಗಳು ಭಾರತವನ್ನು ಸೆಮಿಕಂಡಕ್ಟರ್ ಹಬ್ ಆಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಈ ಯೋಜನೆಗಳ ಶಿಲಾನ್ಯಾಸವನ್ನು ತೈವಾನ್​ನಲ್ಲಿನ ಸೆಮಿಕಂಡಕ್ಟರ್ ಕ್ಷೇತ್ರದವರೂ ಆನ್​ಲೈನ್​ನಲ್ಲಿ ವೀಕ್ಷಿಸಿ ಬೆರಗಾಗಿದ್ದಾರೆ ಎಂದು ಮೋದಿ ಹೇಳಿದರು.
ಮಹಾ ಸೀಟು ಹಂಚಿಕೆ ಇತ್ಯರ್ಥ:ಮಹಾರಾಷ್ಟ್ರದಲ್ಲಿ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್​ಸಿಪಿ) ಒಳಗೊಂಡ ಮೈತ್ರಿಕೂಟದ ಸೀಟು ಹಂಚಿಕೆ ಕೊನೆಗೂ ಇತ್ಯರ್ಥ ಗೊಂಡಿದೆ. ಆ ಪ್ರಕಾರ ಎನ್​ಸಿಪಿ ಅಜಿತ್ ಪವಾರ್ ಬಾರಾಮತಿ, ರಾಯಗಢ, ಶಿರೂರು ಮತ್ತು ಪರ್ಭಣಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಉಳಿದಂತೆ ಬಿಜೆಪಿ 31 ಹಾಗೂ ಶಿವಸೇನೆ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಕೈ ಮನವಿ ತಿರಸ್ಕರಿಸಿದ ಹೈಕೋರ್ಟ್:ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿರುವ ದೆಹಲಿ ಹೈಕೋರ್ಟ್, ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು 105 ಕೋಟಿ ರೂಪಾಯಿಗೂ ಅಧಿಕ ಆದಾಯ ತೆರಿಗೆ ಬಾಕಿ ಸಂಬಂಧ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್​ಗೆ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು. ‘ತೆರಿಗೆ ಬಾಕಿ ಪ್ರಕರಣದಲ್ಲಿ ಆದೇಶ ನೀಡಲಾಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ’ ಎಂದ ಹೈಕೋರ್ಟ್ ಈ ಅರ್ಜಿ ವಜಾಗೊಳಿಸಿದೆ. ಆದರೆ ನ್ಯಾಯಮಂಡಳಿಗೆ ಹೊಸದಾಗಿ ಮನವಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್​ಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಕಾಂಗ್ರೆಸ್​ಗೆ ಮತ್ತೊಂದು ಹಿನ್ನಡೆ:ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿಗೆ ಸೇರುವ ಮೂಲಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಇನ್ನೊಂದು ಹಿನ್ನಡೆ ಉಂಟಾಗುವಂತಾಗಿದೆ. ನಂದುರ್ಬಾರ್ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವರೂ ಆಗಿರುವ ವಾಲ್ವಿ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯಯಾತ್ರೆ ಮಂಗಳವಾರ ಮಹಾರಾಷ್ಟ್ರದ ನಂದುರ್ಬಾರ್ ಪ್ರವೇಶಿಸಿದ ಸಂದರ್ಭವೇ ಈ ಪಕ್ಷಾಂತರ ನಡೆದಿರುವುದು ಕಾಂಗ್ರೆಸ್​ಗೆ ಮುಜುಗರದ ಸಂಗತಿಯಾಗಿದೆ.
ಎಸ್​ಸಿ-ಎಸ್​ಟಿ ಹಾಗೂ ಹಿಂದುಳಿದ ಸಮುದಾಯಗಳ ಜನರೇ ನಮ್ಮ ಸರ್ಕಾರದ ಯೋಜನೆಗಳ ದೊಡ್ಡ ಫಲಾನುಭವಿಗಳು. ಹಿಂದಿನ ಕಾಂಗ್ರೆಸ್ ಸರ್ಕಾರ ಒಬಿಸಿ ವರ್ಗದವರನ್ನು ನಿರ್ಲಕ್ಷಿಸಿತ್ತು. ನಿಮ್ಮಂತಹ ಸಹೋದರ- ಸಹೋದರಿಯರಿರುವಾಗ ನನಗೆ ಕುಟುಂಬವಿಲ್ಲವೆಂದು ಹೇಳಲು ಸಾಧ್ಯವೇ?. ವಂಚಿತ ವರ್ಗಗಳಿಗೆ ಉಚಿತ ಪಡಿತರ, ಚಿಕಿತ್ಸೆ, ಮನೆ, ಶೌಚಗೃಹ ಹಾಗೂ ಅನಿಲ ಸಂಪರ್ಕ ಒದಗಿಸಲಾಗಿದೆ.
| ನರೇಂದ್ರ ಮೋದಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
