ಬರೇಲಿ:ವಿವಾದಿತ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ನೇಪಾಳ ಸಂಸತ್​ನ ಕೆಳಮನೆಯಲ್ಲಿ ಪರಿಷ್ಕೃತ ನಕ್ಷೆಗೆ ಅನುಮೋದನೆ ಪಡೆದುಕೊಂಡ ಬೆನ್ನಲ್ಲೇ ಭಾರತ ಮತ್ತು ನೇಪಾಳದ ಗಡಿಯನ್ನು ಗುರುತಿಸಲು ಹಾಕಲಾಗಿದ್ದ ಸಾಕಷ್ಟು ಸಂಖ್ಯೆಯ ಪಿಲ್ಲರ್​ಗಳು ಮಾಯವಾಗಿವೆ ಎಂದು ಸಶಸ್ತ್ರ ಸೀಮಾ ಬಲ್​ನ (ಎಸ್​ಎಸ್​ಬಿ) ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್​ ಖೇರಿ ಜಿಲ್ಲಾಧಿಕಾರಿಗೂ ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಎಸ್​ಬಿ, ಗಡಿ ಗುರುತಿಸುವಿಕೆಯ ಪಿಲ್ಲರ್​ಗಳನ್ನು ತೆಗೆದುಹಾಕಿರುವ ನೇಪಾಳದ ಸಶಸ್ತ್ರ ಪಹರಿ ಬಲ್​ (ಎಸ್​ಪಿಬಿ) ಆ ಪ್ರದೇಶಗಳಲ್ಲಿ ಹೊಸ ಹೊರಠಾಣೆಗಳನ್ನು ನಿರ್ಮಿಸಿಕೊಂಡಿದೆ ಎಂದು ಹೇಳಿದ್ದಾರೆ.
ಲಖಿಂಪುರ್​ ಖೇರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಭಾರತ-ನೇಪಾಳದ 62.9 ಗಡಿ ಭಾಗದ ಭದ್ರತೆ ಹೊಣೆಗಾರಿಕೆಯನ್ನು ಎಸ್​ಎಸ್​ಬಿಯ 39ನೇ ಬೆಟಾಲಿಯನ್​ ವಹಿಸಿಕೊಂಡಿದೆ. ಎಸ್​ಎಸ್​ಬಿಯ ಕಮಾಂಡಂಟ್​ ಮುನ್ನಾ ಸಿಂಗ್​ ಅವರು ನೇಪಾಳದ ಅತಿಕ್ರಮಣವನ್ನು ವಿವರಿಸಿ ಲಖಿಂಪುರ್​ ಖೇರಿಯ ಜಿಲ್ಲಾಧಿಕಾರಿ ಶೈಲೇಂದ್ರ ಸಿಂಗ್​ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಹೆತ್ತ ಒಡಲ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೇ ಬಾಲೆ?
ಎಷ್ಟು ಪಿಲ್ಲರ್​ಗಳನ್ನು ಕಿತ್ತುಹಾಕಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಅದು ತುಂಬಾ ಗೌಪ್ಯ ಸಂಗತಿ ಎಂದು ಕಮಾಂಡಂಟ್​ ಮುನ್ನಾಸಿಂಗ್​ ಸುದ್ದಿಗಾರರಿಗೆ ಹೇಳಿದ್ದಾರೆ.
ಖೇರಿ ಜಿಲ್ಲೆಯು ನೇಪಾಳದ ಕಾಂಚನಪುರ ಜಿಲ್ಲೆ ಮತ್ತು ಕೈಲಾಲಿ ಜಿಲ್ಲೆಗಳೊಂದಿಗೆ ಗಡಿಭಾಗವನ್ನು ಹಂಚಿಕೊಳ್ಳುತ್ತದೆ. ಬಿಹಾರದಲ್ಲಿ ಹಾದು ಹೋಗಿರುವ ಭಾರತ-ನೇಪಾಳೆ ಗಡಿ ಭಾಗದಲ್ಲಿ ಇತ್ತೀಚೆಗೆ ನೇಪಾಳದ ಸಶಸ್ತ್ರ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬಿಹಾರದ ಒಬ್ಬ ರೈತ ಮೃತಪಟ್ಟಿದ್ದರು. ಜತೆಗೆ ಇನ್ನಿಬ್ಬರು ಗಾಯಗೊಂಡಿದ್ದರು. ಈ ಘಟನೆಯ ನಂತರದಲ್ಲಿ ನೇಪಾಳದೊಂದಿಗಿನ ಗಡಿ ಭಾಗದಲ್ಲಿ ಭಾರತ ಪಹರೆಯನ್ನು ಹೆಚ್ಚಿಸಿದೆ.
ಅಭಿಮಾನಿಯ ಕೋರಿಕೆಗೆ ಸ್ಪಂದಿಸಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಸುಶಾಂತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
