ಚೆನ್ನೈ:ಇದೊಂದು ಅತಿ ದುಃಖಾಂತ್ಯದ ಪ್ರೇಮಕಥೆ. ಮದುವೆಯಲ್ಲಿ ಸುಖಾಂತ್ಯವಾಗಬೇಕಿದ್ದ ಈ ಪ್ರೇಮಿಗಳಿಬ್ಬರ ಬದುಕು ಆತ್ಮಹತ್ಯೆಯಲ್ಲಿ ಕೊನೆಗೊಂಡಿದೆ. ಪ್ರೀತಿಸುತ್ತಿದ್ದ ಇಬ್ಬರೂ ಒಬ್ಬರ ಹಿಂದೊಬ್ಬರಂತೆ ಪ್ರಾಣತ್ಯಾಗ ಮಾಡಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿನ 20 ವರ್ಷದ ವಿದ್ಯಾರ್ಥಿನಿ ಎಂ. ಸುಜಾತಾ ಹಾಗೂ 24 ವರ್ಷದ ಯುವಕ ಸಿಲಂಬರಸನ್​ ಸಂಬಂಧಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸುಜಾತಾ ಜತೆ ಮದುವೆ ಆಗುವುದಕ್ಕೆ ಸಿಲಂಬರಸನ್ ಮನೆಯವರ ವಿರೋಧವಿತ್ತು. ಅತ್ತ ಮನೆಯವರನ್ನು ಒಪ್ಪಿಸಲಾಗದೆ, ಇತ್ತ ಸುಜಾತಾಳನ್ನು ಬಿಟ್ಟಿರಲಾಗದೆ ಇಕ್ಕಟ್ಟಿಗೆ ಸಿಲುಕಿದ ಸಿಲಂಬರಸನ್​ ದಿಕ್ಕೆಟ್ಟು ಚಿತ್ತೂರಿನಲ್ಲಿರುವ ತನ್ನ ಮನೆಯಲ್ಲಿ ಫೆ. 22ರಂದು ನೇಣು ಹಾಕಿಕೊಂಡು ಮೃತಪಟ್ಟಿದ್ದ.
ಪ್ರೇಮಿ ಸಿಲಂಬರಸನ್​ ಆತ್ಮಹತ್ಯೆ ಮಾಡಿಕೊಂಡು ಅಗಲಿದ್ದಕ್ಕೆ ತೀವ್ರ ಬೇಸರಗೊಂಡ ಸುಜಾತಾ ತೀರ ಖಿನ್ನತೆಗೆ ಒಳಗಾಗಿದ್ದಳು. ಮನೆ ಬದಲಿಸಿದರೆ ಸರಿಯಾಗಬಹುದು ಎಂದುಕೊಂಡು ಮನೆಯವರು ಆಕೆಯನ್ನು ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿದ್ದರು. ಆದರೆ ಆ ಬೇಸರದಿಂದ ಹೊರಬರದ ಸುಜಾತಾ ಊಟ-ತಿಂಡಿ ತ್ಯಜಿಸಿದ್ದಳು. ಉಪವಾಸದಿಂದ ಕೃಶವಾಗಿದ್ದ ಸುಜಾತ, ಸಿಲಂಬರಸನ್ ಸತ್ತ ಒಂದೇ ವಾರಕ್ಕೆ ಸ್ವತಃ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಚಿಕ್ಕವಯಸ್ಸಲ್ಲೇ ಬಹಳ ಎತ್ತರಕ್ಕೇರಿದ್ದಾಳೆ ಈ ಬಾಲಕಿ!; ಏಷ್ಯಾದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಈಕೆ ಈಗ ಸಾಧಕಿ…

ಪಂಚರಾಜ್ಯಗಳ ಚುನಾವಣೆ: ಚುನಾವಣಾ ಪೂರ್ವ ಸಮೀಕ್ಷೆಗಳು ಏನು ಹೇಳುತ್ತವೆ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:six + 4 =
Remember me
