ಹೈದರಾಬಾದ್:ಒಬ್ಬನೇ ವ್ಯಕ್ತಿಯಲ್ಲಿ ಎರಡೂ ಜನನಾಂಗ ಇರುವುದು ಕಂಡುಬಂದಿರುವ ಅತ್ಯಪರೂಪದ ಪ್ರಕರಣವೊಂದು ವರದಿಯಾಗಿದೆ. 40 ವರ್ಷದ ಪುರುಷನಲ್ಲಿ ಸ್ತ್ರೀ-ಪುರುಷ ಜನನಾಂಗ ಇದ್ದಿದ್ದು, ಕೊನೆಗೆ ವೈದ್ಯರು ಈತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ.
ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್ ಎನ್ನಲಾಗುವ ಈ ಸ್ಥಿತಿ ಅತ್ಯಪರೂಪವಾಗಿದ್ದು, ಜಗತ್ತಿನಲ್ಲಿ ಈ ವರೆಗೆ ಇಂಥ 300 ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಇದುವರೆಗೆ ಇಂಥ ಇಪ್ಪತ್ತು ಪ್ರಕರಣಗಳು ಕಂಡುಬಂದಿವೆ.
ಹೈದರಾಬಾದ್​ನ ಮಂಚೇರಿಯಲ್​ನ ಈ ವ್ಯಕ್ತಿಯಲ್ಲಿ ಎರಡೂ ಜನನಾಂಗ ಇದ್ದು, ಸಿಕಂದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಸರ್ಜರಿ ಮಾಡಲಾಗಿದೆ. ಕಿಬ್ಬೊಟ್ಟೆ ನೋವು ಹಾಗೂ ನಪುಂಸಕತೆ ಹಿನ್ನೆಲೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕಾವೇರಿ ನದಿ ನೀರು ವಿವಾದ: ಇಂದು ರಚನೆ ಆಯ್ತು ತ್ರಿಸದಸ್ಯ ಪೀಠ; ಸದಸ್ಯರ ಮಾಹಿತಿ ಇಲ್ಲಿದೆ..
ದೈಹಿಕವಾಗಿ ಸಹಜವಾಗಿಯೇ ಕಾಣಿಸುತ್ತಿದ್ದ ಈ ವ್ಯಕ್ತಿಯಲ್ಲಿ ಸ್ತ್ರೀ ಜನನಾಂಗದ ಆಂತರಿಕ ರಚನೆಗಳಾದ ಗರ್ಭಾಶಯ, ಫ್ಯಾಲೋಪಿಯನ್ ಟ್ಯೂಬ್ ಮಾತ್ರವಲ್ಲದೆ ಭಾಗಶಃ ಯೋನಿ ಕೂಡ ಕಂಡುಬಂದಿದೆ. ಈತನಲ್ಲಿ ಶಿಶ್ನವಿದ್ದರೂ ವೃಷಣ ಕಿಬ್ಬೊಟ್ಟೆಯಲ್ಲಿತ್ತು. ಹೀಗಾಗಿ ವೀರ್ಯ ಉತ್ಪಾದನೆ ಇರಲಿಲ್ಲ.
ಇದನ್ನೂ ಓದಿ:ಚಂದ್ರಯಾನ-3: ರೋಮಾಂಚಕ ಆಗಿರಲಿವೆ ಆ ಇಪ್ಪತ್ತು ನಿಮಿಷಗಳು!
ಆತನನ್ನು ಲ್ಯಾಪರೋಸ್ಕೋಪಿಕ್ ಹಿಸ್ಟಿರೋ ಸಾಲ್ಪಿಂಗೆಕ್ಟಮಿ ಸರ್ಜರಿಗೆ ಒಳಪಡಿಸಲಾಗಿದೆ. ಹದಿನೆಂಟು ವರ್ಷಕ್ಕೆ ಮೊದಲೇ ಆತ ಆಸ್ಪತ್ರೆಗೆ ಬಂದು ವಿಷಯ ಗೊತ್ತಾಗಿರುತ್ತಿದ್ದರೆ ಸಂತಾನೋತ್ಪತ್ತಿ ಶಕ್ತಿ ಮರುಕಳಿಸಿರುತ್ತಿತ್ತು. ಆದರೆ ಈಗ ತಡವಾದ್ದರಿಂದ ನಪುಂಸಕತೆ ಉಳಿದುಕೊಳ್ಳುವಂತಾಗಿದೆ. ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಮಾಡಲಾಗಿದ್ದು, ವೈದ್ಯರ ಸೂಚನೆಯಂತೆ ಆರೈಕೆಯಲ್ಲಿದ್ದಾನೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. –ಏಜೆನ್ಸೀಸ್
ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
