ಬರೇಲಿ:ತಮ್ಮ ವಿವಾಹಕ್ಕೆ ಕುಟುಂಬದವರು ವಿರೋಧಿಸಿದರೆಂದು ಸಂಬಂಧಿಕರಾದ ಯುವಕ-ಯುವತಿ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶನಿವಾರ ಬೆಳಿಗ್ಗೆ ಇಬ್ಬರೂ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಜಹಾನಪುರದ ಮದ್ನಾಪುರದ ಪಂಖಾಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.21 ವರ್ಷದ ಯುವಕನೊಬ್ಬ 18 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಅವರಿಬ್ಬರೂ ಪರಸ್ಪರ ಸಂಬಂಧಿಕರಾಗಿದ್ದರು. ಪೋಷಕರು ತಮ್ಮ ಮದುವೆಯನ್ನು ವಿರೋಧಿಸಿದ್ದಕ್ಕೆ ಅವರಿಬ್ಬರೂ ಶುಕ್ರವಾರ ಓಡಿಹೋದರು.
ಇದನ್ನೂ ಓದಿ:ಲಾಕ್​ಡೌನ್​ನಿಂದ ಅಂಗಡಿ ಮುಚ್ಚಿದ ಅಪ್ಪ, ಉಳುಮೆಗೆ ಇಬ್ಬರು ಪುತ್ರಿಯರೇ ಎತ್ತುಗಳು!
ಪೊಲೀಸರ ಪ್ರಕಾರ, ಯುವಕ ಮತ್ತು ಆ ಯುವತಿ (ಸೋದರಸಂಬಂಧಿ) ಕಳೆದ ಕೆಲವು ವರ್ಷಗಳಿಂದ ಸಂಬಂಧಲ್ಲಿದ್ದರು. ಇಬ್ಬರೂ ಕಾಲೇಜು ಸ್ನೇಹಿತರಾಗಿದ್ದರು. ಸಂಬಂಧದಲ್ಲಿ ಹುಡುಗ ಹುಡುಗಿಯ ಮಾವನ ಮಗ.ಯುವಕನ ತಂದೆ ಆತನಿಗೆ ಬೇರೆಡೆ ಹುಡುಗಿ ನೋಡಿ ಮದುವೆ ಮಾಡುವ ಯೋಚನೆಯಲ್ಲಿದ್ದರು. ಅದೇ ಕಾರಣಕ್ಕೆ ಶುಕ್ರವಾರ ತಂದೆ – ಮಗನ ಮಧ್ಯೆ ವಾಗ್ವಾದ ನಡೆದು, ಆನಂತರ ಆತ ಮನೆಯಿಂದ ಹೊರಟುಹೋಗಿದ್ದ.ಹುಡುಗನ ಕುಟುಂಬ ಆತನನ್ನು ಹುಡುಕಲು ಪ್ರಾರಂಭಿಸಿದಾಗ, 18 ವರ್ಷದ ಬಾಲಕಿಯೂ ಕಾಣೆಯಾಗಿರುವುದು ತಿಳಿದುಬಂತು. ಸ್ವಲ್ಪ ಸಮಯದ ನಂತರ, ಇಬ್ಬರೂ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದರು.
ಇದನ್ನೂ ಓದಿ:ಬಿಬಿಎಂಪಿ : ಮಕ್ಕಳ ತಜ್ಞ ಹುದ್ದೆಗೆ ವೇತನ ಎಷ್ಟಿರುತ್ತದೆ?
ಎರಡೂ ಕುಟುಂಬದವರು ಪರಸ್ಪರ ಸಂಬಂಧಿಕರಾಗಿರುವುದರಿಂದ ಆ ಯುವಕ-ಯುವತಿಯ ಮದುವೆಗೆ ಕುಟುಂಬದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದನ್ನು ಹೊರತುಪಡಿಸಿ ಇಲ್ಲಿಯವರೆಗೆ ಯಾವುದೇ ಅನುಮಾನ ಕಂಡುಬಂದಿಲ್ಲ. ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಂಜಯ್ ಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ನೋವು ಮರೆಸಿದ ‘ಕಾರ್ಗಿಲ್’ ಗೆಲುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − twelve =
Remember me
