ನವದೆಹಲಿ:ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಕರ್ನಾಟಕ ರಾಜ್ಯದ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವನ್ನು ಕೊನೆಗೆ ರಕ್ಷಿಸಲಾಗಿತ್ತು. ಇದೀಗ ಇಂತಹುದೇ ಘಟನೆ ಗುರುಗ್ರಾಮದಲ್ಲಿ ನಡೆದಿದೆಯಾದರೂ ಬಾಲಕ ಬಾರದ ಲೋಕಕ್ಕೆ ಹೋಗಿದ್ದಾನೆ. ಹೌದು, ಎರಡು ವರ್ಷದ ಬಾಲಕ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸೆಕ್ಟರ್ 37ರಲ್ಲಿ ನಡೆದಿದೆ.
ಸಿಹಿ ಗ್ರಾಮದಲ್ಲಿರುವ ತನ್ನ ತಂದೆ ಭಗತ್ ಕುಮಾರ್ ಟೀ ಅಂಗಡಿಯ ಮುಂದೆ ಬಾಲಕ ಪ್ರದೀಪ್ ಕುಮಾರ್ ಆಟವಾಡುವಾಗ ಈ ಘಟನೆ ನಡೆದಿದೆ ಎಂದು ಠಾಣಾಧಿಕಾರಿ ಸತ್ಯವಾನ್ ಮಾಹಿತಿ ನೀಡಿದ್ದಾರೆ.
“ನನ್ನ ಪುತ್ರ ಟೀ ಅಂಗಡಿಯೆದುರು ಆಟವಾಡುತ್ತಿದ್ದಾಗ ಕಾಣೆಯಾದ. ನಾವು ಆತನನ್ನು ಹುಡುಕಾಡಲು ಪ್ರಾರಂಭಿಸಿದಾಗ, ಆತ ಒಳಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂತು” ಎಂದು ಭಗತ್ ಕುಮಾರ್ ತಮ್ಮ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಪ್ರಾಧಿಕಾರಗಳು ಮ್ಯಾನ್‌ಹೋಲ್ ಅನ್ನು ತೆರೆದ ಸ್ಥಿತಿಯಲ್ಲೇ ಬಿಟ್ಟು ಹೋಗಿರುವುದು ಕಾರಣ ಎಂದು ಬಾಲಕನ ತಂದೆ ದೂರಿದ್ದಾರೆ.
ಭಗತ್ ಕುಮಾರ್ ದೂರನ್ನು ಆಧರಿಸಿ ಎಫ್‌ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 3 =
Remember me
