ಸಪೋರ್:ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಸಪೋರ್​ ಪಟ್ಟಣದಲ್ಲಿ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯ ವೇಳೆ ಮೂರು ವರ್ಷದ ಬಾಲಕನೊಬ್ಬ ಬದುಕುಳಿದಿದ್ದು, ದುರಾದೃಷ್ಟವಶಾತ್​ ಬಾಲಕನ ತಾತಾ ಗುಂಡೇಟಿನಿಂದ ಪ್ರಾಣ ಬಿಟ್ಟಿದ್ದಾರೆ.
ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದ ಗಸ್ತು ತಂಡದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ. ಗುಂಡಿನ ದಾಳಿಗೆ ಸ್ಥಳೀಯ ನಾಗರಿಕರೊಬ್ಬರು ಬಲಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ಮೃತದೇಹದ ಮೇಲೆ ಅವರ ಮೊಮ್ಮಗ ಕುಳಿತು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿದೆ.
ಇದನ್ನೂ ಓದಿ:ಅತ್ಯಾಚಾರ, ಲೈಂಗಿಕ ಕಿರುಕುಳ ಸಂತ್ರಸ್ತರ ಬಾಯಿ ಮುಚ್ಚಿಸಲು 143 ಕೋಟಿ ರೂ. ಕೊಟ್ಟ ಚಿತ್ರ ನಿರ್ಮಾಪಕ
ಬಾಲಕನನ್ನು ಪೊಲೀಸರು ಎತ್ತಿಕೊಂಡಾಗ ಆತ ತುಂಬಾ ಭಯಭೀತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಫೋಟೋವನ್ನು ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿದ್ದು, ಪೊಲೀಸ್​ ಸಿಬ್ಬಂದಿಯೊಬ್ಬರು ಮಗುವನ್ನು ಸುರಕ್ಷಿತವಾಗಿ ಎತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.
JKP#rescueda three years old boy from getting hit by bullets during#terrorist#attackin#Sopore.@JmuKmrPolicepic.twitter.com/hzqGGvG7yN
— Kashmir Zone Police (@KashmirPolice)July 1, 2020

ಮಗು ತನ್ನ ತಾತನೊಂದಿಗೆ ಮಾರುತಿ ಕಾರಿನಲ್ಲಿ ಶ್ರೀನಗರದಿಂದ ಹಂದ್ವಾರಾಗೆ ತೆರಳುತ್ತಿತ್ತು. ಈ ವೇಳೆ ಸಪೋರ್​ ಪಟ್ಟಣದಲ್ಲಿ ಉಗ್ರರು ಹಾಗೂ ಸೇನೆ ನಡುವೆ ಗುಂಡಿನ ದಾಳಿ ನಡೆದಿದ್ದು, ಬಾಲಕನ ತಾತನಿಗೆ ಗುಂಡು ತಗುಲಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸಿಆರ್​ಪಿಎಫ್​ ಯೋಧರು ಸಹ ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದಾದರೂ ಉಗ್ರರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಜಮ್ಮುವಿನ ಬಳಿ ಉಗ್ರರ ದಾಳಿಗೆ ಓರ್ವ ಯೋಧ ಹುತಾತ್ಮ- ಇಬ್ಬರ ಸ್ಥಿತಿ ಗಂಭೀರ
ಕಳೆದ ವಾರ ಆರು ವರ್ಷದ ಮಗು ಉಗ್ರರ ದಾಳಿಯ ಸಂದರ್ಭದಲ್ಲಿ ಅನಂತ್​ನಾಗ್​ನಲ್ಲಿ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಮನಕಲಕುವ ನಡೆದಿರುವುದು ಉಗ್ರರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.(ಏಜೆನ್ಸೀಸ್​)
188 ವರ್ಷದ ‘ಅಜ್ಜ’ನ ಸ್ನಾನ ನೋಡಿ… ದಾಖಲೆ ಪುಟದಲ್ಲಿ ದೀರ್ಘಾಯಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
