ಭೋಪಾಲ್​:ಆರು ವರ್ಷದ ಬಾಲಕನೊಬ್ಬ ಅನಾರೋಗ್ಯ ಪೀಡಿತ ತನ್ನ ತಂದೆಯನ್ನು ತಳ್ಳುಗಾಡಿಯ ಮೇಲೆ ಮಲಗಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ರಾಜ್ಯದ ಆರೋಗ್ಯ ಮೂಲ ಸೌಕರ್ಯದ ದುರಾವಸ್ಥೆಗೆ ಕನ್ನಡಿ ಹಿಡಿದಂತಿದೆ.
ಟೀ ಶರ್ಟ್​ ಮತ್ತು ಪೌಡರ್​ ಬ್ಲೂ ಡೆನಿಮ್​ ಜೀನ್ಸ್​ ಧರಿಸಿರುವ ಬಾಲಕ, ತಳ್ಳುಗಾಡಿಯನ್ನು ನೂಕುತ್ತಾ ನಿಯಂತ್ರಿಸುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಬಾಲಕನ ತಾಯಿಯು ಕೂಡ ಮತ್ತೊಂದು ತುದಿಯಿಂದ ತಳ್ಳುಗಾಡಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯವಿದ್ದು, ಸುಮಾರು ಮೂರು ಕಿ.ಮೀ ದೂರ ತಾಯಿ-ಮಗ ಗಾಡಿ ನೂಕಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಮಧ್ಯ ಪ್ರದೇಶ ಸಿಂಗ್ರೌಲಿ ಪಟ್ಟಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸಾಕಷ್ಟು ನೆಟ್ಟಿಗರು ಅಲ್ಲಿನ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಬಾಲಕನ ಕುಟುಂಬ ಇದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್​ಗೆಂದು ಕರೆ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಸುಮಾರು 20 ನಿಮಿಷದವರೆಗೆ ಕಾದಿದ್ದಾರೆ. ಆದರೆ, ಯಾವುದೇ ಪ್ರಯೋಜನಾ ಇಲ್ಲ ಅಂತಾ ಗೊತ್ತಾದಾಗ ತಳ್ಳುಗಾಡಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ತೀರ್ಮಾನಿಸಿತು.
ವೈರಲ್​ ವಿಡಿಯೋ ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು, ತನಿಖೆಗೆ ಆದೇಶ ಹೊರಡಿಸಿದೆ.(ಏಜೆನ್ಸೀಸ್​)
ಡ್ರೋನ್ ಬೇಟೆಗೆ ರಣಹದ್ದು!; ಹಕ್ಕಿಗಳಿಗೆ ತರಬೇತಿ ನೀಡುತ್ತಿದೆ ಸೇನೆ

ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ; ಊಹಾಪೋಹಕ್ಕೆ ತೆರೆ ಎಳೆದ ಸಚಿವ ಅಮಿತ್ ಷಾ

ದಶಪಥ ಹೆದ್ದಾರಿ, ಪ್ರಧಾನಿ ಮೋದಿ ಶಹಬಾಸ್​ಗಿರಿ; ಸಿಎಂ ಬೊಮ್ಮಾಯಿ ಟ್ವೀಟ್​ಗೆ ಪ್ರತಿಕ್ರಿಯೆ, ಡಬಲ್ ಎಂಜಿನ್ ಸರ್ಕಾರದ ಚಮತ್ಕಾರ ಎಂದು ಬಣ್ಣನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
