ಝಾನ್ಸಿ:ಏಳು ವರ್ಷದ ತನ್ನ ಮನೆಯ ಸಮೀಪವಿರುವ ಅಂಗಡಿಯೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಐದು ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಆಘಾತಕಾರಿ ಘಟನೆಯು : ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.ಇದನ್ನೂ ಓದಿ:ಕ್ರಿಕೆಟ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದ ಯುವಕ: ಮುಂದೆ ನಡೆದಿದ್ದಿಷ್ಟು..ಗಾಯಗೊಂಡಿರುವ ಬಾಲಕನನ್ನು ವಿರಾಟ್(7)​ ಎಂದು ಗುರುತಿಸಲಾಗಿದ್ದು, ಈತ ಭಾನುವಾರ ಸಂಜೆ ಚಾಕಲೇಟ್ ಖರೀದಿಸಲು ತನ್ನ ಮನೆಯ ಸಮೀಪವಿರುವ ಅಂಗಡಿಯೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಐದು ನಾಯಿಗಳು ದಾಳಿ ಮಾಡಿದ್ದು, ಈ ಆಘಾತಕಾರಿ ಘಟನೆಯು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬಾಲಕ ಕಿರುಚುತ್ತಿದ್ದಂತೆ ನೆರೆಹೊರೆಯವರು ಓಡಿ ಬಂದು ನಾಯಿಗಳನ್ನು ತಡೆಯಲು ಹರಸಾಹಸ ಪಟ್ಟರೂ ನಾಯಿಗಳು ಬಾಲಕನ್ನು ನೆಲಕ್ಕೆ ಎಳೆಯುವುದರ ಜತೆಗೆ ದಾಳಿ ಮಾಡುತ್ತಲೇ ಇದ್ದವು. ಕೊನೆಗೆ ಕೋಲಿನಿಂದ ನಾಯಿಗಳನ್ನು ಬೆದರಿಸಿದ ನಂತರ ಬಾಲಕನಿಂದ ದೂರ ಹೋಗಿದ್ದು, ಘಟನೆಯಲ್ಲಿ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.
ನಾಯಿಗಳು ಒಟ್ಟಿಗೆ ಬೊಗಳುವುದನ್ನು ಕೇಳಿದಾಗ ತಾನು ಮನೆಕೆಲಸದಲ್ಲಿ ನಿರತಳಾಗಿದ್ದೆ. ಬೀದಿನಾಯಿಗಳು ಯಾರಿಗಾದರೂ ದಾಳಿ ಮಾಡುತ್ತಿವೆ ಎಂದು ತಾನು ಹೆದರಿ ಹೊರಗೆ ಧಾವಿಸಿದಾಗ, ಅವು ತನ್ನ ಮಗನ ಮೇಲೆ ದಾಳಿ ಮಾಡಿದ್ದನ್ನು ನೋಡಿದೆ. ಕೂಡಲೇ ತನ್ನ ನೆರೆಹೊರೆಯವರು ತನ್ನ ಮಗನನ್ನು ಉಳಿಸಿ ಮನೆಗೆ ಕರೆತಂದಿದ್ದು, ತನ್ನ ಮಗ ಘಟನೆಯಿಂದಾಗಿ ಘಾತಕ್ಕೊಳಗಾಗಿದ್ದಾನೆ ಎಂದು ಎಂದು ವಿರಾಟ್ ತಾಯಿ ಲಕ್ಷ್ಮಿ ಗುಪ್ತಾ ಹೇಳಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
