ಬೆತುಲ್​:ಮೈದಾನದಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಆಕಸ್ಮಿಕವಾಗಿ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆತಂಕಕಾರಿ ಘಟನೆ ಮಧ್ಯ ಪ್ರದೇಶದ ಬೆತುಲ್​ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಸಂಜೆ 5 ಗಂಟೆಗೆ ಅವಘಡ ಸಂಭವಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕನ ಹೆಸರು ತನ್ಮಯ್​ ದಿಯಾವಾರ್​. ಗ್ರಾಮದ ಮೈದಾನದಲ್ಲಿ ಆಡುತ್ತಿದ್ದ ತನ್ಮಯ್​, ಇತ್ತೀಚೆಗಷ್ಟೇ ಅಗೆದಿದ್ದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದು ಆಥನರ್​ ಪೊಲೀಸ್​ ಠಾಣೆಯ ಅಧಿಕಾರಿ ಅನೊಲ್​ ಸೋನಿ ತಿಳಿಸಿದ್ದಾರೆ.
ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೊಳವೆ ಬಾವಿಯ ಸುತ್ತ ಮತ್ತ ಏರಿಯಾವನ್ನು ಅಗೆಯಲು ಅರ್ಥ್​ಮೂವಿಂಗ್​ ಯಂತ್ರವನ್ನು ತರಿಸಲಾಗಿದೆ. ಬಾಲಕನಿಗೆ ಆಕ್ಸಿಜನ್​ ಒದಗಿಸಲು ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಕೊಳವೆ ಬಾವಿಯ ಸುಮಾರು 60 ಅಡಿ ಆಳದಲ್ಲಿ ಬಾಲಕ ಸಿಲುಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕ ಬದುಕಿ ಬರಲೆಂದು ಮಧ್ಯ ಪ್ರದೇಶದ ಜನರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.(ಏಜೆನ್ಸೀಸ್​)
ಎಲ್ಲೆಲ್ಲೂ ವೈರಲ್ ವಿಜಯಾನಂದ; ಪ್ಯಾನ್ ಇಂಡಿಯಾ ಪ್ರಚಾರ ಹೊಸತನಗಳ ಮಹಾಪೂರ

ಜಗದಗಲ ಅಂಕಣ: ಕೃತಘ್ನ ಪಾಕ್ ವ್ಯವಸ್ಥೆಯಲ್ಲಿ ಮಾಡಿದ್ದುಂಡ ಮಹಾರಾಯರು!

ಕಾಂತಾರ ಮತ್ತು ರಿ‍ಷಭ್ ಶೆಟ್ಟಿ ಬಗ್ಗೆ ನಟಿ ಅನಸೂಯ ಭಾರದ್ವಜ್​ ಮಾಡಿದ ಕಾಮೆಂಟ್​ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 20 =
Remember me
