ಲಖನೌ:ಸೆಪ್ಟೆಮಬರ್​ 21ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಬಾಂಬ್​ ಹಾಕಿ ಧ್ವಂಸಗೊಳಿಸಲಾಗುವುದು ಎಂದು ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಅಪ್ರಾಪ್ತ ವಯಸ್ಕ ಹಾಗೂ ಆತನ ತಂದೆಯನ್ನು ಉತ್ತರಪ್ರದೇಶದ ಬರೇಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಸಂಜೆ ಸುಮಾರಿಗೆ ಪೊಲೀಸ್​ ಸಹಾಯವಾಣಿ 112ಕ್ಕೆ ಕರೆ ಬಂದಿದ್ದು, ನಂಬರ್ ಟ್ರೇಸ್​ ಮಾಡಿ ಅಪ್ರಾಪ್ತ ವಯಸ್ಕ ಹಾಗೂ ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ; ಚುನಾವಣಾ ಗಿಮಿಕ್​ ಎಂದ ಟಿಎಂಸಿ ಸಂಸದೆ
ಈ ಕುರಿತು ಪ್ರತಿಕ್ರಿಯಿಸಿರುವ ಬರೇಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮುಕೇಶ್​ ಚಂದ್ರ ಮಿಶ್ರಾ ಮಂಗಳವಾರ ಸಂಜೆ ಪೊಲೀಸ್​ ಸಹಾಯವಾಣಿ 112ಕ್ಕೆ ವ್ಯಕ್ತಿಯೊಬ್ಬರು ಕರೆ ಮಾಡಿ ಸೆಪ್ಟೆಂಬರ್ 21ರಂದು ರಾಮಮಂದಿರವನ್ನು ಬಾಂಬ್​ ಹಾಕಿ ಧ್ವಂಸ ಮಾಡಲಾಗುವುದು ಎಂದು ಹೇಳಿ ಕರೆ ಕಟ್​ ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಂಬರ್​​​ ಟ್ರೇಸ್​ ಮಾಡಿದಾಗ ಬರೇಲಿಯ ಫತೇಗಂಜ್​ನಿಂದ ಕರೆ ಬಂದಿರುವುದಾಗಿ ತಿಳಿಯಿತು.
ಅಧಿಕಾರಿಗಳು ಸ್ಥಳಕ್ಕೆ ತೆರಲಿ ಪರಿಶೀಲಿಸಿದಾಗ ಕರೆ ಮಾಡಿರುವುದು ಅಪ್ರಾಪ್ತ ವಯಸ್ಕ ಎಂದು ತಿಳಿಯಿತು. ಸಿಮ್​ ಕಾರ್ಡ್​ ಆತನ ತಂದೆ ಹೆಸರಿನಲ್ಲಿದ್ದ ಕಾರಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ಆಗ ಬಾಲಕ ವಿಡಿಯೋ ಒಂದನ್ನು ನೋಡಿ ಪೊಲೀಸರಿಗೆ ತಿಳಿಸಲು ಕರೆ ಮಾಡಿದ್ದಾಗಿ ಹೇಳಿದ್ದಾನೆ. ಬೆದರಿಕೆ ಹಾಕುವ ಉದ್ದೇಶದಿಂದಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್​ ಚಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
