ಸಿರಿಸಿಲ್ಲಾ:ಯೂಟ್ಯೂಬ್ ವೀಡಿಯೋಗಳನ್ನು ಅನುಸರಿಸುತ್ತಿದ್ದ ಹನ್ನೊಂದು ವರ್ಷದ ಬಾಲಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾ ಎಂಬಲ್ಲಿ ನಡೆದಿದೆ.6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಯೂಟ್ಯೂಬ್‌ನಲ್ಲಿ ತಮಾಷೆಯನ ವಿಡಿಯೋಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದನು. ಶನಿವಾರ ರಾತ್ರಿ ಊಟ ಮುಗಿಸಿ ಕೊಠಡಿಗೆ ತೆರಳಿದ್ದ ಬಾಲಕ ಮೊಬೈಲ್​​ನಲ್ಲಿ ಬ್ಯುಸಿಯಾಗಿದ್ದು ಬೀಗವನ್ನು ಹಾಕಿಕೊಂಡಿದ್ದ.ಇದನ್ನೂ ಓದಿ:ಬೆಲೆ ಏರಿಕೆಯ ನಡುವೆ ಶುಭ ಸುದ್ದಿ: ಇಪಿಎಫ್​ ಬಡ್ಡಿ ದರ ಹೆಚ್ಚಳಕ್ಕೆ ಕೆಂದ್ರದಿಂದ ಅನುಮೋದನೆಕೆಲ ಸಮಯದ ನಂತರ ಉದಯ್​​ನ ಪಾಲಕರು ಆತನಿಗೆ ಕರೆ ಮಾಡಿದ್ದು, ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಬಾಗಿಲು ಒಡೆದು ನೋಡಿದಾಗ ಬಾಲಕನು ಮೃತದೇಹ ಗೋಡೆಯ ಮೇಲೆ ನೇತಾಡುತ್ತಿರುವುದು ಕಂಡುಬಂದಿದೆ.
ಗಾಬರಿಯಾಗಿದ್ದ ಪೋಷಕರು, ಬಾಲಕನನ್ನು ಮಂಡಲ್ ಸೆಂಟರ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಸುದ್ದಿಯನ್ನು ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
