ಶಂಶಾಬಾದ್‌:ಆಟವಾಡುವಾಡುತ್ತಿದ್ದ ವೇಳೆ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಏಳು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿ ನಡೆದಿದೆ.
ಮೃತ ಬಾಲಕನ್ನು ಅಭಿಜಿತ್​ ರೆಡ್ಡಿ ಎಂದು ಗುರುತಿಸಲಾಗಿದೆ. ನಂದಿಗಾಮ ಮೂಲದ ಶ್ರೀಕಾಂತ್ ರೆಡ್ಡಿ ಎಂಬುವರು ತನ್ನ ಸಂಬಂಧಿಕರ ಮದುವೆಗೆಂದು ಹೆಂಡತಿ ಮತ್ತು ಮಗ ಅಭಿಜಿತ್​ ಜತೆಗೆ ಶಂಶಾಬಾದ್‌ನ ಪಂಕ್ಷನ್ ಹಾಲ್​ಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ್ ಮದುವೆ ಕೆಲಸದಲ್ಲಿ ನಿರತರಾಗಿದ್ದರೆ, ಮಗ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದಾನೆ.
ಇದನ್ನೂ ಓದಿ:ವಿದೇಶಿ ಜಾತಿಯ ಸಾಕು ಬೆಕ್ಕನ್ನು ಅಪಹರಿಸಿ ತೃತೀಯ ಲಿಂಗಿಗಳ ಗುಂಪು..!
ಸ್ವಲ್ಪ ಸಮಯದವರೆಗೆ ಮಗ ಬಾರದೆ ಇದ್ದಾಗ ಶ್ರೀಕಾಂತ್ ಸಂಬಂಧಿಕರಿಗೆ ಈ ಕುರಿತಾಗಿ ವಿಚಾರಿಸಿದ್ದಾರೆ. ಆದರೆ, ಬಾಲಕನ ಸುಳಿವು ಲಭ್ಯವಾಗದ ಕಾರಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧವನ್ನೂ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗದ ಕಾರಣ ಬಾಲಕನ ತಂದೆಯು ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಫಂಕ್ಷನ್ ಹಾಲ್ ತಲುಪಿ ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಫಂಕ್ಷನ್ ಹಾಲ್‌ನ ಹಿಂಭಾಗದಲ್ಲಿ ಒಳಚರಂಡಿ ಗುಂಡಿಯೊಂದು ಕಂಡುಬಂದಿದ್ದು, ಅಧಿಕಾರಿಗಳು ಅದನ್ನು ಶೋಧಿಸಿದ್ದು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗು ಬಿದ್ದಿರುವುದನ್ನು ನೋಡಿದ ಪೋಷಕರು ಬೆಚ್ಚಿಬಿದ್ದಿದ್ದು, ಬಳಿಕ ಶವವನ್ನು ಹೊರ ತೆಗೆಯಲಾಗಿದೆ. ಫಂಕ್ಷನ್ ಹಾಲ್ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮಗು ಪ್ರಾಣ ಕಳೆದುಕೊಂಡಿದೆ ಎಂದು ಸಂಬಂಧಿಕರು ಆರೋಪಿಸಿ ಫಂಕ್ಷನ್ ಹಾಲ್ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
