ಕೊಂಡಪಲ್ಲಿ:ಆಕಸ್ಮಿಕವಾಗಿ ಟ್ರ್ಯಾಕ್ಟರ್ ಟೈರ್‌ ಮೈಮೇಲೆ ಬಿದ್ದು ಎರಡು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಇಬ್ರಾಹಿಂಪಟ್ಟಣಂ ಜಿಲ್ಲೆಯ ಕೊಂಡಪಲ್ಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ: 4 ಜನರ ಬಾಳಿಗೆ ಬೆಳಕಾದ ಮಹಿಳೆ..
ಮೃತ ದುರ್ದೈವಿಯನ್ನು ಇಸಾ(2) ಎಂದು ಗುರುತಿಸಲಾಗಿದ್ದು, ಈ ಸಂಬಂಧ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿವೆ. ಕೊಂಡಪಲ್ಲಿಯ ಟ್ರ್ಯಾಕ್ಟರ್ ಕಂಪನಿಯಲ್ಲಿ ಜೋಜಿ ಎಂಬ ವ್ಯಕ್ತಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಕಂಪನಿಯ ಕೊಠಡಿಯಲ್ಲಿಯೇ ವಾಸವಾಗಿದ್ದು, ನಿಗದಿತ ವೇಳೆಯಲ್ಲಿ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತನ ಪತ್ನಿಗೆ ಸ್ವಪ್ನಾಗೆ ಇತ್ತೀಚೆಗಷ್ಟೇ ಹೆರಿಗೆಯಾಗಿದ್ದು, ಆಕೆ ಆಸ್ಪತ್ರೆಯಲ್ಲಿದ್ದಾಳೆ.
ಜೋಜಿ ತನ್ನ ನಾಲ್ಕು ವರ್ಷದ ಮಗಳು ಶ್ರೀರಾಣಿ ಮತ್ತು ಎರಡು ವರ್ಷದ ಮಗ ಇಸಾನೊಂದಿಗೆ ಕಂಪನಿಯಲ್ಲಿ ಕೊಠಡಿಯ ವಾಸಿಸುತ್ತಿದ್ದು, ಹವಾ ತುಂಬಿದ್ದ ಟ್ರ್ಯಾಕ್ಟರ್ ಟೈರ್‌ನೊಂದನ್ನು ಗೋಡೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಆದರೆ ಮಗು ಭಾನುವಾರ ಸಾಯಂಕಾಲ ಆಟವಾಡುತ್ತ ಇದರ ಹತ್ತಿರ ಬಂದಿದ್ದು, ಈ ವೇಳೆ ಟೈರ್​ ಮಗು ಮೇಲೆ ಬಿದ್ದಿದೆ.
ಇದನ್ನೂ ಓದಿ:ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದ ತಾಯಿ: ಸಿಟ್ಟಿಗೆದ್ದ ಮಗು ಮಾಡಿದ್ದಿಷ್ಟು..
ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಕ್ಷಣ ಬಾಲಕನನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದರು ಸಹ ಮಗು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
