ಮುಂಬೈ:ಗೋರೆಗಾಂವ್ ಪೂರ್ವದ ಆರೆ ಮಿಲ್ಕ್ ಕಾಲೋನಿಯಲ್ಲಿ ಗುರುವಾರ ರಾತ್ರಿ ಅಪಾರ್ಟ್ಮೆಂಟ್ ಕಟ್ಟಡದ 20 ನೇ ಮಹಡಿಯಿಂದ ಬಿದ್ದು 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಒಬೆರಾಯ್ ಎಕ್ಸ್.ಕ್ವಿಸಿಟ್ ಟವರ್ಸ್ ನಲ್ಲಿ ವಾಸಿಸುತ್ತಿದ್ದ ಆತ ತನ್ನ ಬೆಡ್ರೂಮ್ ನಲ್ಲಿ ಆಟವಾಡುತ್ತಿದ್ದಾಗ ರಾತ್ರಿ 8 ಗಂಟೆ ಸುಮಾರಿಗೆ ಗಾಜಿನ ಕಿಟಕಿಯಿಂದ ಜಾರಿಬಿದ್ದಿದ್ದಾನೆ.
“ಹುಡುಗನ ತಾಯಿ ಅಡುಗೆಮನೆಯಲ್ಲಿದ್ದಾಗ ಹುಡುಗ ಕಿಟಕಿಯ ಹೊರಗೆ ಇಣುಕಿ ಕೆಳಗೆ ಬಿದ್ದಿದ್ದಾನೆ” ಎಂದು ಆರೆ ಕಾಲೋನಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
6ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕನನ್ನು ಲೈಫ್ ಲೈನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಗುವಿನ ಪೋಷಕರಿಗೆ ಯಾವುದೇ ಅನುಮಾನಗಳಿಲ್ಲದ ಕಾರಣ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.
“ನಾವು ಹುಡುಗನ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದು ಶುಕ್ರವಾರ ಎಡಿಆರ್ (ಆಕಸ್ಮಿಕ ಸಾವಿನ ಪ್ರಕರಣ) ದಾಖಲಿಸಿದ್ದೇವೆ” ಎಂದು ಅಧಿಕಾರಿ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
