ನವದೆಹಲಿ:ಇತ್ತೀಚಿನ ದಿನಗಳಲ್ಲಿ ಐಫೋನ್​ ಸ್ಮಾರ್ಟ್​ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೆಚ್ಚಿದೆ. ಯಾರನ್ನು ನೋಡಿದ್ರೂ ಆ್ಯಪಲ್​ ಫೋನದ್ದೇ ಸದ್ದು. ದುಬಾರಿ ಮೊತ್ತದ ಈ ಐಫೋನ್​ ತಮ್ಮ ಬಳಿಯಿದ್ರೆ, ತಾವು ದೊಡ್ಡ ಮಂದಿ ಎಂಬ ಹುಚ್ಚು ಕಲ್ಪನೆ ಹಲವರದ್ದು. ಹೀಗಾಗಿ ದೇಶದಲ್ಲಿ ಈ ಬ್ರ್ಯಾಂಡ್​ನ ಮೊಬೈಲ್​ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಆ್ಯಪಲ್​ ಫೋನ್ ಖರೀದಿಸುವವರ ಸಂಖ್ಯೆ ಇದೀಗ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿಯೇ ಅಧಿಕ ಎಂಬ ವರದಿಗಳು ಕೂಡ ಪ್ರಕಟವಾಗಿವೆ. ಸದ್ಯ ಈ ಶಾಕಿಂಗ್​ ಮಾಹಿತಿ ತಿಳಿದ ಅನೇಕರು, ಇದೀಗ ಜಾಲತಾಣಗಳಲ್ಲಿ ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಕ್ಷಾಬಂಧನದ ಇತಿಹಾಸ ಹೇಳಿದ ಸುಧಾಮೂರ್ತಿ​​​; ವಿಡಿಯೋ ನೋಡಿ ನೆಟ್ಟಿಗರು ಕಿಡಿ..
ಈ ಶಾಕಿಂಗ್ ವರದಿಗೆ ಇಲ್ಲೊಂದು ಘಟನೆ ಪುಷ್ಟಿ ನೀಡಿದ್ದು, ಗ್ರಾಮೀಣ ಭಾಗದ ಹುಡುಗನೊಬ್ಬ ಹೂವು ಮಾರಾಟ ಮಾಡಿ, ಜೀವನ ಸಾಗಿಸುವ ತನ್ನ ಬಡ ತಾಯಿಯ ಸಂಪಾದನೆಯಲ್ಲಿ ದುಬಾರಿ ಬೆಲೆಯ ಐಫೋನ್​ ಅನ್ನು ಖರೀದಿಸಿದ್ದಾನೆ. ದೇವಾಲಯದಲ್ಲಿ ಹೂವು ಮಾರಿ, ಅದರಿಂದ ಬರುವ ಹಣದಲ್ಲಿ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗುವ ಅಮ್ಮನ ಜವಾಬ್ದಾರಿಯನ್ನು ಕಡಿಮೆ ಮಾಡಬೇಕಿದ್ದ ಪುತ್ರನೇ, ಆಕೆ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಐಫೋನ್​ ತೆಗೆಸಿಕೊಂಡಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ದುಬಾರಿ ಮೊತ್ತದ ಫೋನ್ ಕೊಡಿಸುವಂತೆ ಹೆತ್ತವಳ ಬಳಿ ಮನವಿ ಮಾಡಿದ್ದ ಪುತ್ರ, ಅಮ್ಮ ನನಗೆ ಐಫೋನ್ ಕೊಡಿಸುವುದಿಲ್ಲ ಎಂದು ಮುಂದಾಲೋಚನೆ ಮಾಡಿ ಮೂರು ದಿನಗಳ ಕಾಲ ಊಟ, ನೀರು ಸೇವಿಸದೆ ಉಪವಾಸ ಕೈಗೊಂಡಿದ್ದಾನೆ. ನಿರಂತರವಾಗಿ ಏನೂ ತಿನ್ನದೆ, ಹಠ ಹಿಡಿದು ಕುಳಿತ ಮಗನ ಪರಿಸ್ಥಿತಿಗೆ ಮರುಗಿದ ತಾಯಿ, ಆಯಿತು, ನಿನ್ನಷ್ಟದಂತೆ ಆಗಲಿ ಎಂದು ಕಡೆಗೂ ಐಫೋನ್ ಕೊಡಿಸಿದ್ದಾರೆ.
ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ ಸ್ಥಳೀಯರೊಬ್ಬರು ಆ ತಾಯಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಅವರ ಪ್ರಶ್ನೆಗೆ ಉತ್ತರಿಸಿದ ಮಹಿಳೆ, “ಮೂರು ದಿನಗಳಿಂದ ಏನ್ನನ್ನು ತಿನ್ನದೆ ಊಪವಾಸ ಮಾಡಿದ್ದ. ಒಂದೇ ಸಮ ಹಠ ಹಿಡಿದಿದ್ದ. ಅದಕ್ಕೆ ಮಗನ ಇಷ್ಟದಂತೆ ಅದೇ ಫೋನ್ ಕೊಡಿಸಿದ್ದೇನೆ, ಖುಷಿ ಇದೆ. ಅವನಿಗೆ ಒಂದೇ ಮಾತು ನಾನು ಹೇಳಿದ್ದು, ಈಗ ನೀಡಿರುವ ಹಣವನ್ನು ಮುಂದೆ ನೀನು ಸಂಪಾದಿಸಬೇಕು. ಆ ಐಫೋನ್​ ಬೆಲೆಯೆಷ್ಟಿದೆಯೋ ಅಷ್ಟೇ ದುಡ್ಡನ್ನು ನನಗೆ ವಾಪಾಸ್ ದುಡಿದು ತಂದುಕೊಡಬೇಕು ಎಂದಿದ್ದೇನೆ” ಎಂದರು.
ಇದನ್ನೂ ಓದಿ:2 ಸಾವಿರ ಕೋಟಿ ರೂ. ವೆಚ್ಚದಲ್ಲಿ 61 ರೈಲ್ವೆ ನಿಲ್ದಾಣ ಅಭಿವೃದ್ಧಿ
ತಾಯಿಯ ಮಾತುಗಳು ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಹುಡುಗನ ವಿರುದ್ಧ ತೀವ್ರ ಕಿಡಿಕಾರಿದ್ದು, ಹೆತ್ತವರ ಕಷ್ಟ ಅರ್ಥ ಮಾಡಿಕೊಳ್ಳದ ಮಕ್ಕಳು ಏಕೆ? ಮೊಬೈಲ್​ಗೋಸ್ಕರ ಹೀಗೆಲ್ಲಾ ತಾಯಿ ಮನಸ್ಸನ್ನು ನೋವಿಸಬೇಕಾ? ಪೋಷಕರು ಕೂಡ ತಮ್ಮ ಮಕ್ಕಳಿಗೆ ಇಷ್ಟೊಂದು ಪ್ರೀತಿ ಕೊಡಬಾರದು, ಪ್ರೀತಿಸಬಾರದು. ಏಕೆಂದರೆ ಅವರಿಗೆ ಇದರ ಮೌಲ್ಯ, ಬೆಲೆ ಖಂಡಿತ ಗೊತ್ತಾಗುವುದಿಲ್ಲ. ಅತಿಯಾದ್ರೆ ಅಮೃತವೂ ವಿಷ ಎಂಬುದು ನೆನಪಿನಲ್ಲಿರಲಿ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 5 =
Remember me
