ಪಟಿಯಾಲಾ (ಪಂಜಾಬ್‌):ಕರೊನಾ ವೈರಸ್ ಹಿನ್ನೆಲೆಯಲ್ಲಿ, ಈಗ ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್‌ ಕ್ಲಾಸ್ ಭರಾಟೆ. ಆನ್‌ಲೈನ್‌ ಕ್ಲಾಸ್‌ಗಾಗಿ ಸ್ಮಾರ್ಟ್‌ಫೋನ್‌ ಇಲ್ಲದೇ, ನೆಟ್‌ವರ್ಕ್‌ ಸಿಗದೇ ಎಷ್ಟೋ ಮಕ್ಕಳು ಪರದಾಡುವ ಪರಿಸ್ಥಿತಿ ವರದಿಯಾಗುತ್ತಲೇ ಇದೆ. ಕೆಲ ಬಡ ಮಕ್ಕಳು ಸ್ಮಾರ್ಟ್‌ಪೋನ್‌ ಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ವಿಷಾದಕರ ಘಟನೆಗಳೂ ನಡೆದಿವೆ.
ಆದರೆ ಇವುಗಳ ನಡುವೆಯೇ ಇಲ್ಲೊಂದು ಕುತೂಹಲ ಎನ್ನುವಂಥ ಘಟನೆ ನಡೆದಿದೆ. ಆನ್‌ಲೈನ್‌ ಕ್ಲಾಸ್‌ನಿಂದಾಗಿಯೇ 10 ವರ್ಷಗಳ ನಂತರ ಬಾಲಕನೊಬ್ಬ ತನ್ನ ಕುಟುಂಬವನ್ನು ಸೇರಿದ್ದಾನೆ!
ಈ ಕುತೂಹಲ ಘಟನೆ ನಡೆದಿರುವುದು ಪಂಜಾಬ್‌ನ ಪಟಿಯಾಲಾದಲ್ಲಿ. 10 ವರ್ಷಗಳ ಹಿಂದೆ 8 ವರ್ಷದನಿದ್ದ ಬಾಲಕ ಅಬ್ದುಲ್‌ ರಜಾಕ್‌ನ ರೋಚಕ ಕಥನವಿದು.
ಅಬ್ದುಲ್‌ಗೆ ಮೂಕ ಮತ್ತು ಕಿವುಡ. ಈಗ 8 ವರ್ಷದ ಬಾಲಕನಿದ್ದ ಸಂದರ್ಭದಲ್ಲಿ ಫತೇಘರ್‌ನಲ್ಲಿ ನಡೆದ ಜಾತ್ರೆಯ ವೇಳೆ ಪಾಲಕರ ಜತೆಗೆ ಹೋಗಿದ್ದ. ಆದರೆ ಅಲ್ಲಿಯೇ ಆತ ಪಾಲಕರಿಂದ ತಪ್ಪಿಸಿಕೊಂಡು ಬಿಟ್ಟಿದ್ದ. ಆತನಿಗಾಗಿ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ವರ್ಷ ಕಳೆದಂತೆ ಆತನ ಆಸೆಯನ್ನೇ ಪಾಲಕರು ಬಿಟ್ಟುಬಿಟ್ಟಿದ್ದರು.
ಆ ಬಾಲಕ ಎಲ್ಲೆಲ್ಲೋ ಅಲೆದಾಡತೊಡಗಿದ್ದ. ಕೊನೆಗೆ ಆತ ಗುರ್ನಮ್ ಸಿಂಗ್ ಎನ್ನುವವರ ಕೈಸೇರಿದ. ಬಾಲಕನ ಅವಸ್ಥೆ ಕಂಡ ಅವರು ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವನನ್ನು ಕಿವುಡು-ಮೂಕರ ಶಾಲೆಗೆ ಸೇರಿಸಿದರು. ಅಲ್ಲಿಯೇ ಅಬ್ದುಲ್‌ ಎಸ್‌ಎಸ್‌ಎಲ್‌ಸಿ ಪೂರೈಸಿದ.
ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ ಕ್ಲಾಸ್‌ ಶುರುವಾಗಿತ್ತು. ಆಗ ಫೇಸ್‌ಬುಕ್‌ ಖಾತೆಯನ್ನು ತೆರೆಯುವಂತೆ ಹೇಳಲಾಗಿತ್ತು. ಈಗ 18 ವರ್ಷದ ಯುವಕನಾಗಿರುವ ಅಬ್ದುಲ್‌ ಫೇಸ್‌ಬುಕ್‌ ಖಾತೆ ತೆರೆದ. ಆಗ ಆತನಿಗೆ ಅದರಲ್ಲಿ ತನ್ನ ಸ್ನೇಹಿತರನ್ನು ಹುಡುಕುವ ಆಸೆಯಾಯಿತು. ಅದರಂತೆ ತನಗೆ ಪರಿಯಚವಿದ್ದ ಸ್ನೇಹಿತನೊಬ್ಬನನ್ನು ಅದರಲ್ಲಿ ಹುಡುಕಿದ. ಆತನ ಹೆಸರು ರಜಾಕ್‌.
ಇದನ್ನೂ ಓದಿ:ಅಂತ್ಯಕ್ರಿಯೆ ವೇಳೆ ನೀರು ಕುಡಿದ ಮೃತ ಶಿಕ್ಷಕ?
ರಜಾಕ್‌ನ ಮುಖವನ್ನು ಫೇಸ್‌ಬುಕ್‌ನಲ್ಲಿ 10 ವರ್ಷಗಳ ಬಳಿಕವೂ ಗುರುತಿಸಿದ ಅಬ್ದುಲ್‌ ಆತನ ಜತೆ ಸಂವಹನ ನಡೆಸಿದೆ. ರಜಾಕ್‌ ಉತ್ತರ ಪ್ರದೇಶದ ಫರುಖಾಬಾದ್‌ನಲ್ಲಿ ನೆಲೆಸಿದ್ದಾನೆ. ಅಲ್ಲಿಯೇ ತನ್ನ ವಿಷಯವನ್ನು ಅಬ್ದುಲ್‌ ಹೇಳಿದ. ನಂತರ ಆತ ಅಬ್ದುಲ್‌ ಮನೆಯವರಿಗೆ ವಿಷಯ ತಿಳಿಸಿದ. ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇದಾದ ಮೇಲೆ ಇದೀಗ ಮಗನನ್ನು ವಾಪಸ್‌ ಕರೆತಂದಿದ್ದಾರೆ. 10 ವರ್ಷ ಆತನನ್ನು ಸಾಕಿದ ಸಿಂಗ್‌ ಕುಟುಂಬಕ್ಕೆ ಆಭಾರಿಯಾಗಿರುವ ಅಬ್ದುಲ್‌ ಪಾಲಕರಿಗಾಗಿರುವ ಸಂತೋಷ ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ!
ದಂಡ ಕಟ್ಟಲು ದುಡ್ಡಿಲ್ಲ- ಕಟ್ಟದಿದ್ರೆ ಭಾರತಕ್ಕೆ ಬಿಡಲ್ಲ: ದುಬೈನಲ್ಲಿ ಕಾರ್ಮಿಕರು ವಿಲವಿಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
