ಖಾಂಡ್ವಾ:ಕರೊನಾ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದ ಶಾಲೆಗಳು ಈಗ ಒಂದೊಂದಾಗಿ ಬಾಗಿಲು ತೆರೆಯಲಾರಂಭಿಸಿವೆ. ಆದರೆ ಅನೇಕ ಶಾಲೆಗಳಲ್ಲಿ ಇನ್ನೂ ಶಾಲಾ ಬಸ್ಸಿನ ವ್ಯವಸ್ಥಗೆ ಮಾತ್ರ ತಡೆಯಿದೆ. ಶಾಲೆಗೆ ತೆರಳು ಬಸ್ಸಿಲ್ಲದ ಕಾರಣ ಈ ಬಾಲಕ ಮಾಡಿದ ಉಪಾಯ ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬೋರಾಡಿ ಮಾಲ್​ ಗ್ರಾಮದಲ್ಲಿ ಶಿವರಾಜ್​ ಹೆಸರಿನ ಬಾಲಕನಿದ್ದಾನೆ. ಇದೀಗ ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕನಿಗೆ ಶಾಲೆ ಆರು ಕಿಮೀ ದೂರದಲ್ಲಿದೆಯಂತೆ. ಮೊದಲೆಲ್ಲ ಶಾಲೆಗೆ ಸೈಕಲ್​ ತೆಗೆದುಕೊಂಡು ಹೋಗುತ್ತಿದ್ದನಂತೆ. ಆದರೆ ಶಾಲೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದಾಗಿ ಸೈಕಲ್​ನಲ್ಲಿ ಹೋಗುವಾಗ ಸಾಕಷ್ಟು ಬಾರಿ ಬೀಳುತ್ತಿದ್ದನಂತೆ.
ಈ ಲಾಕ್​ಡೌನ್​ ಸಮಯದಲ್ಲಿ ಶಿವರಾಜ್​ ತಂದೆ ರೈತ ದೇವರಾಮ್ ಯಾದವ್ ಮನೆಗೆ ಕುದುರೆಯೊಂದನ್ನು ತಂದಿದ್ದಾನೆ. ಮನೆಗೆ ಬಂದ ಕುದುರೆಗೆ ರಾಜಾ ಎಂದು ಹೆಸರಿಟ್ಟ ಕುಟುಂಬ ಮನೆ ಮಗನಂತೆ ಅದನ್ನು ಸಾಕಿದೆ. ರಾಜಾನೊಂದಿಗೆ ಅದ್ಭುತ ಸ್ನೇಹ ಸಂಪಾದಿಸಿರುವ ಶಿವರಾಜ್​ ಶಾಲೆ ಆರಂಭವಾದ ನಂತರ ಒಂದು ಉಪಾಯ ಮಾಡಿದ್ದಾನೆ. ಸೈಕಲ್​ ಬದಲು ರಾಜನನ್ನೇ ಶಾಲೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯ ಬಳಿ ಅನುಮತಿ ಕೇಳಿದ್ದಾನೆ. ಅದಕ್ಕೆ ತಂದೆ ಒಪ್ಪಿಗೆಯನ್ನೂ ನೀಡಿದ್ದಾನೆ.
ಅಪ್ಪನ ಒಪ್ಪಿಗೆಯ ಮೇರೆಗೆ ಇದೀಗ ಪ್ರತಿದಿನ ಶಿವರಾಜ್​ ಕುದುರೆ ರಾಜಾನನ್ನೇ ಶಾಲೆಗೆ ಕರೆದುಕೊಂಡು ಬರುತ್ತಿದ್ದಾನೆ. ಕುದುರೆ ಮೇಲೆ ಕುಳಿತು ಅರಾಮಾಗಿ ಶಾಲೆ ತಲುಪುತ್ತಿದ್ದಾನೆ. ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿರುವ ಶಿವರಾಜ್​ಗೆ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೆಂದರೆ ಹೆಚ್ಚಿನ ಗೌರವವಂತೆ. ಅವರನ್ನೆ ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಆತ ಅವರಿಂದ ಬಹಳಷ್ಟು ಕಲಿತಿರುವುದಾಗಿ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)
‘ಟ್ರಂಪ್​ ಜತೆಗಿನ ಸೆಕ್ಸ್​ ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು!’ ಮಾಜಿ ಅಧ್ಯಕ್ಷನೊಂದಿಗಿನ ರಹಸ್ಯ ಬಿಚ್ಚಿಟ್ಟ ನೀಲಿತಾರೆ

‘ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
