ವಿಶಾಖಪಟ್ಟಣಂ:ನಾಯಿಮರಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.. ಅದೇ ರೀತಿ ಆನ್​ಲೈನ್​ನಲ್ಲಿ ಚಂದದ ನಾಯಿಮರಿಯೊಂದನ್ನು ನೋಡಿ ಇಷ್ಟ ಪಟ್ಟ ಬಾಲಕನೊಬ್ಬ ಅದನ್ನು ತರಿಸಿಕೊಡು ಎಂದು ಅಮ್ಮನಿಗೆ ಹಠ ಹಿಡಿದು ಆಕೆ ಒಪ್ಪದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಷಣ್ಮುಖ ವಂಶಿ (16) ಆತ್ಮಹತ್ಯೆ ಮಾಡಿಕೊಂಡಿರು ಬಾಲಕ. ಈತನ ತಂದೆ ಆರು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಷಣ್ಮುಖ ಅವರ ತಾಯಿ ಉಮಾ, ತನ್ನ ಗಂಡ ಸತ್ತ ನಂತರ ಮಗನೊಂದಿಗೆ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಷಣ್ಮುಖ ಆನ್​ಲೈನ್​ನಲ್ಲಿ 30 ಸಾವಿರ ರೂಪಾಯಿಯ ನಾಯಿ ಮರಿಯೊಂದನ್ನು ನೋಡಿದ್ದ. ಅದನ್ನು ಕೊಡಿಸೆಂದು ತಾಯಿ ಬಳಿ ಬೇಡಿಕೆ ಇಟ್ಟಿದ್ದ. ಈಗ ಬೇಡ, ಮುಂದೊಂದು ದಿನ ಕೊಡಿಸುತ್ತೇನೆಂದು ಸುಮ್ಮನಾಗಿಸಿದ್ದಳು.
ಕಳೆದ ವರ್ಷ ಉಮಾ ಅವರ ತಂದೆ, ಅಜ್ಜಿ ಹಾಗೂ ಚಿಕ್ಕಮ್ಮ ಕರೊನಾಗೆ ಬಲಿಯಾಗಿದ್ದರಂತೆ. ಅವರ ಮರಣ ಸರ್ಟಿಫಿಕೇಟ್​ನ್ನು ತರಲೆಂದು ಉಮಾ ಗಾಜುವಾಕಾಗೆ ಹೋಗಿದ್ದಳು. ಈ ರೀತಿ ಹೊರಗೆ ಹೋಗಿದ್ದೇನೆಂದು ಮಗನಿಗೆ ತಿಳಿಸಿ ಎಂದು ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಷಣ್ಮುಖನಿಗೆ ವಿಚಾರ ತಿಳಿಸಲು ಪಕ್ಕದ ಮನೆಯವರು ಹೋದಾಗ ಮನೆ ಒಳಗಿನಿಂದ ಲಾಕ್​ ಆಗಿರುವುದು ಗೊತ್ತಾಗಿದೆ. ಎಷ್ಟೆಂದರೂ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದು, ಬಾಗಿಲು ಒಡೆದು ನೋಡಿದಾಗ ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 5 =
Remember me
